ಸಿಂಧನೂರು: ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಕುರಿ ಶೆಡ್ ಸೇರಿ 700 ಕುರಿ ಮತ್ತು ಟಗರು ಮರಿಗಳು ಸುಟ್ಟ ಕರಕಲಾಗಿರುವ ಘಟನೆ ತಾಲ್ಲೂಕಿನ ಮುಕ್ಕುಂದಾ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಹೊರವಲಯದಲ್ಲಿರುವ ವೈ.ಹೇಮಲತಾ ಮಧುಸೂದನ್ ರಾವ್ ಅವರು ಕುರಿ ಶೆಡ್ ಹಾಕಿಕೊಂಡು ಕುರಿ ಮತ್ತು ಟಗರು ಮರಿಗಳ ಸಾಕಾಣಿಕೆ ಮಾಡುತ್ತಿದ್ದರು. ಶುಕ್ರವಾರ ಬೆಳಗಿನ ಜಾವ 3 ಗಂಟೆಗೆ ಸುಮಾರಿಗೆ ಕುರಿ ಶೆಡ್ ಗೆ ಆಕಸ್ಮಿಕ ಬೆಂಕಿ ತಗುಲಿ ಧಗ ಧಗ ಉರಿಯ ತೊಡಗಿದೆ. ಈ ಕುರಿತು ಗ್ರಾಮಸ್ಥರು ಮೊದಲಿಗೆ ಕಾರಟಗಿ ಅಗ್ನಿಶಾಮಕ ದಳ ಕಚೇರಿಗೆ, ನಂತರ ಸಿಂಧನೂರು ಅಗ್ನಿ ಶಾಮಕ ದಳದ ಕಚೇರಿಗೆ ಮಾಹಿತಿ ನೀಡಿದ್ದರು. ಆದರೆ ವಾಹನಗಳು ಬರುವಷ್ಟರಲ್ಲಿ ಬೃಹತ್ಕಾರದಲ್ಲಿ ಬೆಂಕಿ ಹತ್ತಿಕೊಂಡಿದ್ದರಿಂದ ಕುರಿ ಶೆಡ್ ನಲ್ಲಿದ್ದ 700 ಕುರಿ, ಟಗರು ಮರಿಗಳು ಬೆಂಕಿಗೆ ಆಹುತಿಯಾಗಿ ಅಪಾರ ಹಾನಿಯಾಗಿದೆ. ಕೊನೆಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಾಸ ಪಟ್ಟರು. ಅಷ್ಟೊತ್ತಿಗೆ ಕುರಿ ಶೆಡ್ ಮತ್ತು ಕುರಿಗಳು ಸಂಪೂರ್ಣವಾಗಿ ಸುಟ್ಟ ಕಾರಕಲಾಗಿದ್ದವು. ಈ ಕುರಿತು ಸಿಂಧನೂರಿನ ಅಗ್ನಿ ಶಾಮಕ ದಳದ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.