ಸಿಂಧನೂರು: ತುಂಗಭದ್ರಾ ಜಲಾಶಯದ 33 ಗೇಟ್ಗಳ ಅಳವಡಿಕೆ ಕಾರ್ಯ ಮೇ 15ರೊಳಗೆ ಪೂರ್ಣಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತುಂಗಭದ್ರಾ ಬೋರ್ಡ್, ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯ ಸರ್ಕಾರಗಳು ಜಂಟಿಯಾಗಿ ತುಂಗಭದ್ರಾ ಜಲಾಶಯದ 33 ಗೇಟ್ಗಳನ್ನು ಹೊಸದಾಗಿ ಅಳವಡಿಸುವ ಕಾಮಗಾರಿ ಕೈಗೆತ್ತಿಕೊಂಡಿದ್ದು, ಈಗಾಗಲೇ 18 ಗೇಟ್ಗಳ ಕೆಲಸ ಶೇ 90ರಷ್ಟು ಪೂರ್ಣಗೊಂಡಿವೆ. 19 ಮತ್ತು ಪಕ್ಕದ ಗೇಟ್ಗಳಿಗೆ ಚೈನ್ ಹಾಕಿ ಟೆಸ್ಟ್ ಸಹ ಮಾಡಲಾಗಿದೆ. ಇನ್ನೂ 13 ಗೇಟ್ಗಳ ಕಾಮಗಾರಿ ವಿವಿಧ ಹಂತದಲ್ಲಿ ಪ್ರಗತಿಯಲ್ಲಿದೆ. ಏ. 15ರಿಂದ ಮೇ 15ರೊಳಗೆ ಈ ಗೇಟ್ಗಳಿಗೆ ಚೈನ್ ಹಾಕುವ ಕೆಲಸವನ್ನು ಮದ್ರಾಸ್ ಕಂಪನಿಗೆ ಟೆಂಡರ್ ನೀಡಲಾಗಿದೆ’ ಎಂದು ಹೇಳಿದರು.

‘ಬಸಾಪುರ ಬಳಿ 13ನೇ ಮೈಲ್ ಕಾಲುವೆ 50 ರಿಂದ70 ಅಡಿಯಷ್ಟು ಒಡೆದು ಅಪಾರ ನೀರು ಪೋಲಾಗಿದೆ. ನೀರು ಕಾಲುವೆಗೆ ಹರಿಸುವ 3 ದಿನಗಳ ಮುಂಚೆಯೇ ಕಾಲುವೆಗೆ ಬೋಂಗಾ ಬಿದ್ದಿರುವ ಕುರಿತು ಗ್ರಾಮಸ್ಥರು ಎಇಇ ಅಮರೇಶ ಗಮನಕ್ಕೆ ತಂದರೂ ಕ್ರಮಕೈಗೊಳ್ಳದೆ ನಿರ್ಲಕ್ಷಿಸಿದ್ದಾರೆ. ಬಸಾಪುರ ಬಳಿ ಕಾಲುವೆ ಒಡೆದಿರುವುದಕ್ಕೆ ಕಾರಣವಾಗಿರುವ ಎಇಇ ಅಮರೇಶ ಹಾಗೂ ಸಿಬ್ಬಂದಿಯನ್ನು ತಕ್ಷಣವೇ ಸೇವೆಯಿಂದ ಅಮಾನತು ಮಾಡಬೇಕು. ಜತೆಗೆ 2 ಸಾವಿರ ಕ್ಯೂಸೆಕ್ನಂತೆ ಕಾಲುವೆಗೆ ನೀರು ಹರಿಸಬೇಕು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್.ತಂಗಡಗಿ ಅವರನ್ನು ಒತ್ತಾಯಿಸಲಾಗುವುದು’ ಎಂದು ಹೇಳಿದರು.

‘ಒಡೆದಿರುವ ಕಾಲುವೆ ಕೆಲಸ ಪೂರ್ಣಗೊಳ್ಳಲು ಒಂದು ತಿಂಗಳು ಬೇಕಾಗುತ್ತದೆ. ಅಲ್ಲಿಯವರೆಗೂ ರಿಂಗ್ ಬಂಡ್ ಹಾಕಿ ಕುಡಿಯುವ ನೀರನ್ನು ಗ್ರಾಮಗಳಿಗೆ ಪೂರೈಕೆ ಮಾಡಬೇಕು ಎಂದು ಸಲಹೆಯನ್ನು ಮುಖ್ಯ ಎಂಜನಿಯರ್ ಮತ್ತು ಸಚಿವರಿಗೆ ನೀಡಲಾಗಿದೆ. ಜತೆಗೆ ಅಧಿವೇಶನದಲ್ಲೂ ಸಹ ಈ ವಿಚಾರದ ಬಗ್ಗೆ ಧ್ವನಿಯೆತ್ತಿ ಚರ್ಚಿಸಲಾಗುವುದು’ ಎಂದು ತಿಳಿಸಿದರು.

ಏಕಪಾತ್ರಾಭಿನಯ: ಸಿಂಧನೂರಿನಲ್ಲಿ ಕೆಲ ಮಹಾನುಭಾವರು ಏಕಪಾತ್ರಾಭಿನಯ ಮಾಡುವಲ್ಲಿ ನಿಪುಣರಾಗಿದ್ದಾರೆ. ಜೋಳ ಖರೀದಿಗೆ ಸಂಬಂಧಿಸಿದಂತೆ ದೂರು ಸಲ್ಲಿಸುವವರು ಅವರೇ, ನಂತರ ಗೊಂದಲ ಸೃಷ್ಟಿಯಾಗಿದೆ ಎಂದು ಜೋಳ ಖರೀದಿ ಕೇಂದ್ರ ಆರಂಭ ಮಾಡಬೇಕು ಎಂದು ಅವರೇ ಹೇಳುತ್ತಾರೆ. ಉದಾಹರಣೆಗೆ ರೌಡಕುಂದಾ ಗ್ರಾಮದ ಸೊಸೈಟಿ ಮುಂದೆ 20-30 ಜನರನ್ನು ಕೂರಿಸಿ ಪ್ರತಿಭಟನೆ ಮಾಡಿಸಿ, ನಂತರ ಅವರೇ ಸಚಿವರ ಬಳಿ ಹೋಗಿ ಜೋಳ ಖರೀದಿ ಕೇಂದ್ರ ತಕ್ಷಣವೇ ಆರಂಭಿಸಬೇಕು ಎಂದು ಫೋಟೋ ತೆಗೆಯಿಸಿಕೊಂಡು ಬಿಟ್ಟಿದ್ದಾರೆ. ಆ ಮಹಾನುಭಾವ ಯಾರೆಂದು ಎಲ್ಲರಿಗೂ ಗೊತ್ತು. ಆತನ ಹೆಸರು ಬಹಿರಂಗ ಪಡಿಸುವುದು ಇಷ್ಟವಿಲ್ಲ. ಜೋಳ ಖರೀದಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಚಿವ ಸ್ಥಾನದ ವಿಶ್ವಾಸ: 30 ರಿಂದ 40 ಜನ ಕಾಂಗ್ರೆಸ್ ಶಾಸಕರು ಗುಪ್ತವಾಗಿ ಚರ್ಚಿಸಿದ್ದು, ಜಿಲ್ಲಾವಾರು ಮತ್ತು ಸಾಮಾಜಿಕ ಬದ್ಧತೆ ಮೇರೆಗೆ 20 ಜನ ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ತೀರ್ಮಾನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಲಾಗಿದೆ. ಅವರು ಸಹ ಸಕರಾತ್ಮಕವಾಗಿ ಸ್ಪಂದಿಸಿದ್ದು, ಅಧಿವೇಶನದ ನಂತರ ದೆಹಲಿಗೆ ತೆರಳಿ ಹೈಕಮಾಂಡ್ ಜತೆಗೆ ಚರ್ಚಿಸುವ ಭರವಸೆ ನೀಡಿದ್ದಾರೆ. ಸಚಿವ ಸ್ಥಾನ ಕೊಡೋದು, ಬಿಡೋದು ಹೈಕಮಾಂಡ್ಗೆ ಬಿಟ್ಟದ್ದು ಎಂದು ಶಾಸಕ ಹಂಪನಗೌಡ ಬಾದರ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡರಾದ ಆರ್.ಅಂಬ್ರೋಸ್, ಖಾಜಿಮಲಿಕ್ ವಕೀಲ, ವೀರೇಶ ಹಟ್ಟಿ, ರಾಮಣ್ಣ ಗೋನವಾರ, ರಾಮನಗೌಡ ಮಲ್ಕಾಪುರ, ಅಯ್ಯಪ್ಪ ಮಲ್ಲಾಪುರ, ಮಲ್ಲನಗೌಡ ಮಾವಿನಮಡ್ಗು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.