ಸಿಂಧನೂರು: ‘ತಾಲ್ಲೂಕಿನ ಗೊಣ್ಣಿಗನೂರು ಗ್ರಾಮ ಆಡಳಿತ ಅಧಿಕಾರಿ ಹನುಮನಗೌಡ ಅವರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕರ್ನಾಟಕ ರಾಜ್ಯ ಕಂದಾಯ ಇಲಾಖಾ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಶುಕ್ರವಾರ ಜಂಟಿಯಾಗಿ ಮಿನಿವಿಧಾನಸೌಧ ಕಚೇರಿಯ ಮುಂದೆ ಪ್ರತಿಭಟಿಸಿ ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿದವು.

ಏ.23 ರಂದು ಗೊಣ್ಣಿಗನೂರು ಗ್ರಾಮ ಆಡಳಿತ ಅಧಿಕಾರಿ ಹನುಮನಗೌಡ ಕರ್ತವ್ಯದ ಮೇಲೆ ಮಲದಿನ್ನಿ (ಡಿ) ಗ್ರಾಮಕ್ಕೆ ಜೋಳದ ಬೆಳೆಯ ಮರು ಸಮೀಕ್ಷೆಗಾಗಿ ಸ್ಥಳ ಪರಿಶೀಲನೆ ಕಾರ್ಯಕ್ಕೆ ತೆರಳಿದ ಸಮಯದಲ್ಲಿ ಅಲ್ಲಿನ ಯಮುನಪ್ಪ ಕರಿಯಮ್ಮ ಬೆಳಗುರ್ಕಿ ತನ್ನ ಹೊಲದಲ್ಲಿ ಬೆಳೆದ ಬೆಳೆಗೆ ಪರಿಹಾರ ಬಾರದೆ ಇರುವುದಕ್ಕೆ ನೀನು ನೀಡಿರುವ ವರದಿಯೇ ಕಾರಣವೆಂದು ಆರೋಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪಿಕಾಶಿಯಿಂದ ತಲೆಗೆ ಹೊಡೆದು ಹಲ್ಲೆ ಮಾಡಿದ್ದಾನೆ. ಅಲ್ಲದೆ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾನೆ. ಆದ್ದರಿಂದ ತಪ್ಪಿತಸ್ಥ ಯಮುನಪ್ಪ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಹಗೂ ಸರ್ಕಾರಿ ನೌಕರರಿಗೆ ಮುಕ್ತವಾಗಿ ಸೇವೆ ಸಲ್ಲಿಸಲು ಸರ್ಕಾರ ಅಗತ್ಯ ಕಾನೂನು ರೂಪಿಸಿ ರಕ್ಷಣೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಒತ್ತಾಯಿಸಿದರು.

ಉಪಾಧ್ಯಕ್ಷ ಸೈಯ್ಯದ್ ಫಸಿಯುಲ್ಲಾ ಖಾದ್ರಿ, ಕಾರ್ಯದರ್ಶಿ ಆನಂದ ಮೋಹನ, ಖಜಾಂಚಿ ವೀರನಗೌಡ, ವಿಎಓ ಅಧ್ಯಕ್ಷ ಬೀರೇಂದ್ರ, ಕಂದಾಯ ಇಲಾಖದ ಅಧ್ಯಕ್ಷ ಉಮಾಪತಿ, ವಿಎಓ ಹನುಮನಗೌಡ, ಕಂದಾಯ ನೌಕರರ ಸಂಘದ ಖಜಾಂಚಿ ಮಂಜುನಾಥ ಬಿ.ಎಂ ಸೇರಿದಮತೆ ಎಲ್ಲ ಉಪ ತಹಶೀಲ್ದಾರರು, ಶಿರಸ್ತೇದಾರರು, ಕಂದಾಯ ನಿರೀಕ್ಷಕರು, ಎಸ್ಡಿಎ, ಎಸ್ಡಿಎ, ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಪರಿಚಾಲಕರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-32-659216466

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.