ಸಿಂಧನೂರು: ಘನತ್ಯಾಜ್ಯ ವಸ್ತು ನಿರ್ವಹಣೆ-2026ರ ನಿಯಮಗಳ ಅನುಷ್ಠಾನ ಕುರಿತು ನಗರಸಭೆ ವತಿಯಿಂದ 11ನೇ ವಾರ್ಡ್ನ ನಟರಾಜ್ ಕಾಲೊನಿಯಲ್ಲಿ ಜಾಗೃತಿ ಅಭಿಯಾನ ನಡೆಸಲಾಯಿತು.

ಈ ವೇಳೆ ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ ಮಾತನಾಡಿ, ‘ತ್ಯಾಜ್ಯವನ್ನು ನಾಲ್ಕು ವಿಧಗಳಲ್ಲಿ ವಿಂಗಡಿಸುವ ಮೂಲಕ ನಗರಸಭೆ ವಾಹನಕ್ಕೆ ನೀಡಬೇಕು. ತ್ಯಾಜ್ಯ ವಿಂಗಡಣೆ ಕಡ್ಡಾಯವಾಗಿದ್ದು, ವಿಂಗಡಸದೇ ನೀಡಿದರೆ ನಿಯಮಗಳ ಪ್ರಕಾರ ಮನೆಗಳ ವಿದ್ಯುತ್ ಮತ್ತು ನಳ ಸಂಪರ್ಕ ಕಡಿತಗೊಳಿಸಲಾಗುವುದು. ನಗರದ ಸ್ವಚ್ಛತೆ ಪ್ರತಿಯೊಬ್ಬರ ಜವಾಬ್ದಾರಿ ಎಂಬುದನ್ನು ಮರೆಯಬಾರದು. ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯಬಾರು’ ಎಂದು ಮನವಿ ಮಾಡಿದರು.

ಮನೆಮನೆಗೆ ತೆರಳಿ ಘನತ್ಯಾಜ್ಯ ನಿಯಮ-2026 ಕುರಿತು ಸ್ಟೀಕರ್ ಮತ್ತು ಕರಪತ್ರವನ್ನು ವಿತರಿಸುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

ಪರಿಸರ ಎಂಜಿನಿಯರ್ ಚೇತ ನಕುಮಾರ, ಆರೋಗ್ಯ ನಿರೀಕ್ಷಕರಾದ ಕಿಶನ್ ರಾವ್, ಹಣಮಂತ ಯಾದವ, ವೆಂಕಟೇಶ ಕುಮಾರ, ಲಕ್ಷ್ಮೀಪತಿ, ಲಿಂಗರಾಜ ಸೇರಿದಂತೆ ನಗರಸಭೆ ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-32-2121975989

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.