ಸಿಂಧನೂರು: ‘ಬಸಾಪುರ ಬಳಿ ತುಂಗಭದ್ರಾ ಎಡದಂಡೆ ನಾಲೆ ಒಡೆದಿರುವ ಕಾರಣ ಕಾಲುವೆಗೆ ರಿಂಗ್ ಬಂಡ್ ಹಾಕಿ ಕುಡಿಯುವ ಉದ್ದೇಶಕ್ಕೆ 2,000 ಕ್ಯೂಸೆಕ್ ನೀರು ಬಿಡುವುದಾಗಿ ಸಚಿವರು ಸೇರಿ ಶಾಸಕರು ಹೇಳುತ್ತಿದ್ದಾರೆ. ಆದರೆ, ಅಧಿಕಾರಿಗಳು ಪೂರ್ಣ ದುರಸ್ತಿಗೊಳಿಸಿಯೇ ನಾಲೆಗೆ ನೀರು ಬಿಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ಸರ್ಕಾರ ಮತ್ತು ಅಧಿಕಾರಿಗಳ ನಡುವೆ ಹೊಂದಾಣಿಕೆ ಕೊರತೆ ಇದೆ’ ಎಂದು ಮಾಜಿ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ತಾಲ್ಲೂಕಿನ ಕೆರೆಗಳಲ್ಲಿ ನೀರು ಮಲಿನವಾಗಿದೆ. ವಾರಕ್ಕೊಂದು ಬಾರಿ ನೀರು ಬಿಡುವ ಪದ್ಧತಿ ಹಳ್ಳಿಗಳ ಇತಿಹಾಸದಲ್ಲಿಯೇ ಇರಲಿಲ್ಲ. ಪ್ರತಿ ಹಳ್ಳಿಯಲ್ಲಿ ಈ ವರ್ಷ 8 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ತಾಲ್ಲೂಕಿನಾದ್ಯಂತ ಮಲಿನ ನೀರು ಕುಡಿದು ಜನರು ರೋಗಗಳಿಗೆ ತುತ್ತಾಗುವ ಪರಿಸ್ಥಿತಿ ಬರುವುದರಲ್ಲಿ ಸಂಶಯವಿಲ್ಲ’ ಎಂದರು.

‘ಆದಷ್ಟು ಬೇಗ ಎಡದಂಡೆ ನಾಲೆ ದುರಸ್ತಿಗೊಳಿಸಿ ಕುಡಿಯುವ ನೀರು ಪೂರೈಸಬೇಕು’ ಎಂದು ಒತ್ತಾಯಿಸಿದರು.

‘ಈ ಸರ್ಕಾರದಲ್ಲಿ ಅಧಿಕಾರಿಗಳಿಗೆ ಜನಪ್ರತಿನಿಧಿಗಳ ಬಗ್ಗೆ ಭಯವೇ ಇಲ್ಲ. ಜೋಳ ಖರೀದಿ ಕೇಂದ್ರದಿಂದ ಗೋದಾಮುಗಳಿಗೆ ತೆಗೆದುಕೊಂಡು ಹೋದ ಜೋಳದ ಚೀಲ ಪಡೆಯಲು ಅಧಿಕಾರಿಗಳು ₹5 ಸಾವಿರ ಲಂಚ ಕೇಳುತ್ತಿದ್ದಾರೆ’ ಎಂದರು.

‘ಬೇಜವಾಬ್ದಾರಿ ಶಾಸಕ’: ‘ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದರೂ ಶಾಸಕ ಹಂಪನಗೌಡ ಬಾದರ್ಲಿ ತಲೆ ಕೆಡಿಸಿಕೊಳ್ಳುವುದಿಲ್ಲ. ರೈತರ ಜೋಳ ಖರೀದಿ ವಿಷಯದಲ್ಲಿ ಆಗುವ ಅವ್ಯವಹಾರ, ಅವ್ಯವಸ್ಥೆಯ ಬಗ್ಗೆಯೂ ಶಾಸಕರು ಕಿಂಚಿತ್ತೂ ಗಮನ ಹರಿಸುವುದಿಲ್ಲ. ಅವರು ಚುನಾವಣೆಯಲ್ಲಿ ಗೆದ್ದ ನಂತರ ತಾಲ್ಲೂಕಿನ ಯಾವುದೇ ಗ್ರಾಮದಲ್ಲಿ ಒಂದು ಪುಟ್ಟಿ ಮಣ್ಣು ಹಾಕಿರುವ ಉದಾಹರಣೆ ಇಲ್ಲ. ಯಾವುದೇ ಅಭಿವೃದ್ಧಿ ಕೆಲಸಕ್ಕೆ ಆಸಕ್ತಿ ತೋರದ ಬೇಜವಾಬ್ದಾರಿ ಶಾಸಕರಾಗಿದ್ದಾರೆ’ ಎಂದು ಆರೋಪಿಸಿದರು. ಮುಖಂ ಡರಾದ ದಾಸರಿ ಸತ್ಯನಾರಾಯಣ, ಅಶೋಕಗೌಡ ಗದ್ರಟಗಿ, ಅಲ್ಲಮಪ್ರಭು ಪೂಜಾರ, ಜಿಲಾನಿ ಪಾಷಾ, ಎಸ್.ಪಿ.ಟೇಲರ್, ಯಂಕೋಬ, ಸುಮಿತ್ ತಡಕಲ್, ರವಿ ಪನ್ನೂರು ಹಾಗೂ ಸೈಯದ್ ಆಸಿಫ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-32-612994965

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.