ಸಿಂಧನೂರು: ಹಣ ದುರ್ಬಳಕೆ ಆರೋಪ: ಕ್ರಮಕ್ಕೆ ಆಗ್ರಹ
ಸಿಂಧನೂರು: ‘ತಾಲ್ಲೂಕಿನ ಗಾಂಧಿನಗರ ಗ್ರಾಮ ಪಂಚಾಯಿತಿ ಪಿಡಿಒ ಶೋಭಾರಾಣಿಯವರು ತಮ್ಮ ಕಾರಿಗೆ ಪಂಚಾಯಿತಿ ಹಣದಿಂದ ಡಿಸೇಲ್ ಹಾಕಿಸಿಕೊಂಡು ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ದುರುಗಪ್ಪ ವೀರಾಪುರ ಆರೋಪಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,‘ಗಾಂಧಿನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ವೆಂಕಟೇಶ್ವರ ಕ್ಯಾಂಪ್, ತಾಯಮ್ಮ ಕ್ಯಾಂಪ್ ಬರುತ್ತವೆ. ಇಲ್ಲಿ ವಿಪರೀತ ಸೊಳ್ಳೆಗಳಿವೆ. 2014 ರಿಂದ 2021 ರವರೆಗೆ ಪ್ರತಿವರ್ಷ ಎಂಟು ಬಾರಿ ಫಾಗಿಂಗ್ ಮಾಡಲಾಗುತ್ತಿತ್ತು. ಟ್ರ್ಯಾಕ್ಟರ್, ಅಟೋ ಹಾಗೂ ಫಾಗಿಂಗ್ ಮಷಿನ್ ಸೇರಿ ₹60 ರಿಂದ 70 ಸಾವಿರ ಮಾತ್ರ ಖರ್ಚಾಗುತ್ತಿತ್ತು. ಈ ಬಾರಿ ಕೇವಲ 2 ಬಾರಿ ಫಾಗಿಂಗ್ ಮಾಡಲಾಗಿದೆ. ಕಳೆದ ಒಂದು ವರ್ಷದಿಂದ ಅಭಿವೃದ್ಧಿ ಅಧಿಕಾರಿ ಶೋಭಾರಾಣಿ ಅವರು ಲಿಂಗಸುಗೂರಿನಿಂದ ಗಾಂಧಿನಗರ ಗ್ರಾಮ ಪಂಚಾಯಿತಿಗೆ ಬಂದಿದ್ದು, ಅಲ್ಲಿಂದ ಕಾರಿನಲ್ಲಿ ಸಂಚರಿಸುತ್ತಾರೆ. ಪಂಚಾಯಿತಿ ಹಣದಲ್ಲಿ ತಮ್ಮ ಕಾರಿಗೆ ಡಿಸೇಲ್ ಹಾಕಿಸಿಕೊಂಡಿರುವುದರಿಂದ ₹3 ಲಕ್ಷಕ್ಕೂ ಹೆಚ್ಚು ಹಣ ಖರ್ಚಾಗಿದೆ’ ಎಂದು ದೂರಿದರು.
ಈಗಾಗಲೇ ₹2 ಲಕ್ಷ ಹಣ ಪಾವತಿ ಮಾಡಲಾಗಿದ್ದು, ₹65 ಸಾವಿರ ಬಾಲಾಜಿ ಫಿಲ್ಲಿಂಗ್ ಸ್ಟೇಶನ್ ಅವರಿಗೆ ಪಾವತಿ ಮಾಡಬೇಕಿದೆ. ಪಿಡಿಒ ಕಾರಿಗೆ ಡಿಸೇಲ್‍ಗೆ ಖರ್ಚು ಮಾಡಿರುವ ಹಣ ನಂ.1 ಖಾತೆ ಮತ್ತು 15ನೇ ಹಣಕಾಸು ಯೋಜನೆಯಿಂದ ಬಳಸಲಾಗಿದೆ. ಈ ಕುರಿತು ಸಾರ್ವಜನಿಕರಿಂದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ತಕ್ಷಣ ಜಿಲ್ಲಾ ಪಂಚಾಯಿತಿ ಸಿಇಒ, ತಾಲ್ಲೂಕು ಪಂಚಾಯಿತಿ ಇಒ ಪಿಡಿಒ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಟಿ.ಯಲ್ಲಪ್ಪ, ಮುಳ್ಳುಪುಡಿ ವೆಂಕ ಟೇಶ್ವರರಾವ್, ಮಧುವೀರ ಚಕ್ರಧರ, ಬಸವರಾಜ ಪೂಜಾರ್, ಮುಖಂಡರಾ ದ ಚಾಂದ್, ತಾಯಪ್ಪ, ಹನುಮೇಶ ತೆಲಗರ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.