ಸಿಂಧನೂರು: ತಾಲ್ಲೂಕಿನ ಸುಲ್ತಾನಪುರ ಸೀಮೆಯಲ್ಲಿ ಸರ್ವೆ ನಂ.419ಪಿ/1ರ 32 ಎಕರೆ ಮತ್ತು ಸರ್ವೆ ನಂ.186ರ 29 ಎಕರೆ 30 ಗುಂಟೆ ಜಮೀನಿನಲ್ಲಿ ಮಾಜಿ ಶಾಸಕ ವೆಂಕಟರಾವ್ ನಾಡಗೌಡರ ಕುಟುಂಬ ಅಕ್ರಮ ಸಾಗುವಳಿಯನ್ನು ನಿಲ್ಲಿಸಬೇಕು ಹಾಗೂ ಅರ್ಜಿ ಸಲ್ಲಿಸಿದ 30ಕ್ಕೂ ಹೆಚ್ಚು ಫಲಾನುಭವಿಗಳಿಗೆ ಪಟ್ಟಾ ಕೊಡಬೇಕು’ ಎಂದು ಆಗ್ರಹಿಸಿ ಸಿಪಿಐಎಂಎಲ್ ರೆಡ್‍ಸ್ಟಾರ್ ಹಾಗೂ ಕರ್ನಾಟಕ ರೈತ ಸಂಘ ತಾಲ್ಲೂಕು ಘಟಕದಿಂದ ಶುಕ್ರವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿ ಭೂ ಸ್ವಾಧೀನ ಚಳವಳಿ ನಡೆಸಲಾಯಿತು.
‘ನಾಡಗೌಡರ ಕುಟುಂಬ ಸರ್ಕಾರಿ ಭೂಮಿಯನ್ನು ಕಬಳಿಸಿ, ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದಾರೆ. ಇದು ತಹಶೀಲ್ದಾರ್ ಸೇರಿದಂತೆ ಕಂದಾಯ ಅಧಿಕಾರಿಗಳ ಗಮನಕ್ಕಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ಹೀಗಾಗಿ ಸರ್ಕಾರಿ ಹೆಚ್ಚುವರಿ ಭೂಮಿ ಭೂಹೀನರಿಗೆ, ವಸತಿಹೀನರಿಗೆ ದಕ್ಕುವವರೆಗೂ ಹೋರಾಟ ನಿರಂತರವಾಗಿರಲಿದೆ’ ಎಂದು ಸಿಪಿಐ(ಎಂಎಲ್) ರೆಡ್‍ಸ್ಟಾರ್ ಪಕ್ಷದ ರಾಜ್ಯ ಸಮಿತಿ ಸದಸ್ಯ ಎಂ.ಡಿ.ಅಮೀರ ಅಲಿ ಎಚ್ಚರಿಸಿದರು.
ಸಂಚಾಲಕ ಎಂ.ಗಂಗಾಧರ, ಮುಖಂಡರಾದ ಜಿ.ಅಮರೇಶ, ಮಾಬುಸಾಬ ಬೆಳ್ಳಟ್ಟಿ, ಅಜೀಜ್ ಜಾಗೀರದಾರ, ಕರ್ನಾಟಕ ರೈತ ಸಂಘ (ಎಐಕೆಕೆಎಸ್) ಮುಖಂಡರಾದ ಮಲ್ಲಯ್ಯ ಕಟ್ಟಿಮನಿ, ಸಂತೋಷ ಹಿರೇದಿನ್ನಿ, ಮಾರುತಿ ಜಿನ್ನಾಪೂರ, ಯಲ್ಲಪ್ಪ ಉಟಕನೂರು, ಗಿರಿಲಿಂಗಸ್ವಾಮಿ, ಆದೇಶ ನಗನೂರು, ಪ್ರಕಾಶ, ರಾಮಕೃಷ್ಣ, ಶೇಖರಪ್ಪ, ಅಂಬಮ್ಮ ಬಸಾಪೂರ, ಹಂಪಮ್ಮ, ಚೈತ್ರಾ, ರೇಣುಕಮ್ಮ, ಸುಮಂಗಲಾ, ರುಕ್ಮಿಣೆಮ್ಮ, ಜಗದೀಶ್ವರಿ, ಗಂಗಮ್ಮ, ಹೆಚ್.ಆರ್.ಹೊಸಮನಿ, ಮುದಿಯಪ್ಪ, ಹುಲುಗಪ್ಪ ಬಳ್ಳಾರಿ, ಭಾಗ್ಯಾ, ಲಕ್ಷ್ಮಿ, ದೇವಮ್ಮ, ಜುಲೇಖಾಬೇಗಂ, ಸಂಗಮ್ಮ, ಬಿಬೀ ಫಾತಿಮಾ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.