ಸಿರವಾರ: ‘ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಅನ್ನು ಶಾಂತಿ, ಸೌಹಾರ್ದ ಹಾಗೂ ಸಹೋದರತ್ವದ ಭಾವನೆಯೊಂದಿಗೆ ಆಚರಿಸಬೇಕು. ಸರ್ಕಾರದ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಸಿಪಿಐ ಎಂ.ಶಶಿಕಾಂತ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಬಕ್ರೀದ್ ಅಂಗವಾಗಿ ಸೋಮವಾರ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸದಾ ಸಿದ್ಧವಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಹಿಂದೂ-ಮುಸ್ಲಿಮರು ಒಗ್ಗಟ್ಟಾಗಿ ಬಕ್ರೀದ್ ಆಚರಿಸಬೇಕು. ಶಾಂತಿಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ಪಿಎಸ್ಐ ಚಂದ್ರಶೇಖರ ಹಿರೇಮಠ ಮಾತನಾಡಿದರು.

ಖಾಜಿ ಮಂಜೂರ್ ಸಾಬ್, ಖಾಜಿ ನವಾಜ್ ಸಾಬ್, ಪ.ಪಂ ಸದಸ್ಯರಾದ ಹಸೇನಲಿ, ಮೌಲಾಸಾಬ ವರ್ಚಸ್, ಮುಖಂಡರಾದ ಕಲ್ಲೂರು ಬಸವರಾಜ ನಾಯಕ, ರಾಜಪ್ಪ ಹೊನ್ನಟಗಿ, ಮಹ್ಮದ್ ಹುಸೇನ್, ಅರಳಪ್ಪ ಯದಲದಿನ್ನಿ, ಎಚ್.ಕೆ.ಶಿವಗ್ಯಾನಿ, ಜಯಪ್ಪ, ಸತ್ತರಸಾಬ್, ಇಸ್ಮಾಯಿಲ್, ಇಬ್ರಾಹಿಂ, ಶಾಂತಪ್ಪ ಪಿತಗಲ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-32-1273446734

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.