ಸಿರವಾರ: ‘ಮನೆ-ಮನೆಗಳಲ್ಲಿ ರಾಮನ ಆದರ್ಶ, ಪ್ರತಿ ಗ್ರಾಮದಲ್ಲೂ ಶ್ರೀರಾಮ ಮಂದಿರ ನಿರ್ಮಾಣವಾದಾಗ ನಮ್ಮ ದೇಶ ಮತ್ತಷ್ಟು ಸಮೃದ್ಧಿಯಾಗಲಿದೆ’ ಎಂದು ಮುಖಂಡ ಜೆ.ಶರಣಪ್ಪಗೌಡ ಹೇಳಿದರು.

ಪಟ್ಟಣದ ಬಸ್ ನಿಲ್ದಾಣದ ಎದುರಿನ ಬಸವ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಶುಕ್ರವಾರ ನಡೆದ ಶ್ರೀರಾಮ ನವಮಿ ಅಂಗವಾಗಿ ಶ್ರೀರಾಮನ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪೂಜೆ ಸಲ್ಲಿಸಿ ಮಾತನಾಡಿದರು.

‘ಒಂದು ಕುಟುಂಬದಲ್ಲಿನ ಒಬ್ಬ ಮಗ, ಅಣ್ಣ, ಪತಿ, ರಾಜ, ಧರ್ಮಪಾಲಕನ ಎಲ್ಲಾ ರೀತಿಯ ಸದ್ಗುಣಗಳನ್ನು ಆದರ್ಶ ಪುರುಷ ಶ್ರೀರಾಮನಲ್ಲಿ ಕಾಣುತ್ತೇವೆ. ಅದರಂತೆ ನಾವೆಲ್ಲರೂ ಶ್ರೀರಾಮನ ಆದರ್ಶಗಳನ್ನು ಪ್ರೇರಣೆಯಾಗಿ ಪಡೆಯೋಣ’ ಎಂದರು.

ಅಯ್ಯನಗೌಡ ಏರಡ್ಡಿ, ಜಿ.ಲೋಕರಡ್ಡಿ, ಪ.ಪಂ.ಮುಖ್ಯಾಧಿಕಾರಿ ಸುರೇಶ ಶೆಟ್ಟಿ, ರಮೇಶ ದರ್ಶನಕರ್, ನರಸಿಂಹರಾವ್ ಕುಲಕರ್ಣಿ, ಸುರೇಶ ಹೀರಾ ಹಾಗೂ ಮಲ್ಲಿಕಾರ್ಜುನ ಶಿಕಂಠಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪಾನಕ ವಿತರಣೆ ಮಾಡಲಾಯಿತು. ಪ.ಪಂ ಅಧಿಕಾರಿ ಸುನೀತಾ ಸಜ್ಜನ, ಕೃಷ್ಣಾಜಿರಾವ್ ಸೂರ್ಯವಂಶಿ, ಜೆ.ಬಸವರಾಜ ಪಾಟೀಲ, ಸಂದೀಪ ಪಾಟೀಲ, ಮಾಣಿಕ ಶೆಟ್ಟಿ, ಎಂ.ನಿಂಬಯ್ಯ ಸ್ವಾಮಿ, ಪತ್ತಾರ ನಾಗಪ್ಪ, ಗಣೇಕಲ್ ವೀರೇಶ,ಸುಂಕೇಶ್ವರಾಳ ದೇವೇಂದ್ರಪ್ಪ, ಚಿತ್ತಾಪುರ ಮಂಜುನಾಥ, ಪ್ರಾಣೇಶ ಪುರೋಹಿತ, ಚಂದ್ರಕಾಂತ ಪುರೋಹಿತ, ಕೆ.ಶ್ರೀನಿವಾಸ ಬಸಾಪೂರ, ಎಂ.ರಾಜೇಶ, ಜಿ.ಕೆ.ಭಜಂತ್ರಿ, ಭೀಮಾರಾಮ ಪಟೇಲ್, ಹೀರಾರಾಮ್, ಮಹೇಂದ್ರ, ಧನಸಿಂಗ್, ವಿಪುಲ್, ಅಶೋಕ ಪಟೇಲ, ಲಕ್ಷ್ಮಣ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-32-1678422506

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.