ಸಿರವಾರ: ‘ದೇವರ ದಾಸಿಮಯ್ಯನವರ ವಚನಗಳು ದಾಂಪತ್ಯ ಜೀವನ, ಕಾಯಕ ನಿಷ್ಠೆ, ಶಿವತತ್ವ, ಲಿಂಗ ಸಮಾನತೆ, ಭಕ್ತಿ ತತ್ವಗಳಿಂದ ಕೂಡಿದ್ದು, ಇಂದಿನ ನಮ್ಮ ಸಮಾಜಕ್ಕೆ ದಾರಿ ದೀಪವಾಗಿವೆ’ ಎಂದು ನೇಕಾರರ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಪಿ.ಶ್ರೀನಿವಾಸ ಹೇಳಿದರು.

ತಹಶೀಲ್ದಾರ್ ಕಚೇರಿ ಮತ್ತು ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ದೇವರ ದಾಸಿಮಯ್ಯ ಜಯಂತಿ ಅಂಗವಾಗಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪ್ರತಿಯೊಬ್ಬರೂ ತಮ್ಮ ಕಾಯಕ ಮಾಡಿಯೇ ಜೀವಿಸುತ್ತಾರೆ. ಆದರೆ, ತಮ್ಮ ಕಾಯಕದ ಜೊತೆಗೆ ವಚನಗಳನ್ನು ರಚಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಕೀರ್ತಿ ದೇವರ ದಾಸಿಮಯ್ಯನವರಿಗೆ ಸಲ್ಲುತ್ತದೆ’ ಎಂದರು.

ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಅಶೋಕ ಪವಾರ್, ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ನೇಕಾರರ ಒಕ್ಕೂಟದ ತಾಲ್ಲೂಕು ಗೌರವಾಧ್ಯಕ್ಷ ಈರಣ್ಣ ಗಾಳಿ ದಾಸಿಮಯ್ಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಜಿ ಚೌದ್ರಿ, ಉಪಾಧ್ಯಕ್ಷೆ ಲಕ್ಷ್ಮೀ ಆದೆಪ್ಪ, ಮುಖ್ಯಾಧಿಕಾರಿ ಸುರೇಶ ಶೆಟ್ಟಿ, ನೇಕಾರರ ಒಕ್ಕೂಟದ ಮುಖಂಡರಾದ ಶಣ್ಮುಖಪ್ಪ ಮಸ್ಕಿ, ಆಯುಷ್ ವೈದ್ಯ ನಾಗೇಶ ಶ್ಯಾವಿ, ನಾಗರಾಜ ಗುಡ್ಡದಮನೆ, ಇಂದ್ರೇಶಪ್ಪ, ಮಲ್ಲಿಕಾರ್ಜುನ ಜೇಗರಕಲ್, ರಾಜೇಶ ಸ್ಟುಡಿಯೊ, ಉಮಾಶಂಕರ ಜೇಗರಕಲ್, ಉಮೇಶ ಜೇಗರಕಲ್, ವಿರೂಪಾಕ್ಷಿ ಗಾಳಿ, ನಾಗರಾಜ ಪ್ರಧಾನಿ, ಮಹೇಶ ಕೊಳ್ಳಿ, ಜಗದೀಶ ಚಿಂದಿ, ಮಹೇಶ ಸಾಳೇರ್ ಸೇರಿದಂತೆ ಸಮಾಜದ ಮಹಿಳೆಯರು ಮತ್ತು ಪಟ್ಟಣ ಪಂಚಾಯಿತಿ ಸದಸ್ಯರು, ತಹಶೀಲ್ದಾರ್ ಕಚೇರಿ ಸಿಬ್ಬಂದಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-32-1784360899

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.