ಸಿರವಾರ: ಪಟ್ಟಣದ ಪಟ್ಟಣ ಪಂಚಾಯಿತಿಯಲ್ಲಿ 2026-27 ಸಾಲಿನ ₹16 ಕೋಟಿಯ ಆಯವ್ಯಯ ಪತ್ರವನ್ನು ಬುಧವಾರ ಬಿಡುಗಡೆ ಮಾಡಲಾಯಿತು. ₹1.5 ಲಕ್ಷ ಉಳಿತಾಯ ಬಜೆಟ್ ಅನ್ನು ಅಧ್ಯಕ್ಷ ಹಾಜಿ ಚೌದ್ರಿ ಮಂಡಿಸಿದರು.

ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ನಡೆದ ಬಜೆಟ್ ಸಭೆಯಲ್ಲಿ ಬಜೆಟ್ ಓದಿದ ಅವರು, 16ನೇ ಹಣಕಾಸು ಯೋಜನೆಯಿಂದ ರೂ ₹2.61 ಕೋಟಿ ಮೂಲಸೌಕರ್ಯ ಒದಗಿಸಲು ಬಂದಿದ್ದು, ₹73 ಲಕ್ಷ ತೆರಿಗೆಯಿಂದ ಸಂಗ್ರಹವಾಗಿದೆ ಎಂದರು.

ರಾಜಸ್ವ ಮೂಲಗಳಿಂದ ₹5.93 ಕೋಟಿ, ವಿವಿಧ ಬಂಡವಾಳಗಳಿಂದ ₹5.20 ಕೋಟಿ, ವಿಶೇಷ ವಸೂಲಾತಿಗಳಿಂದ ₹5.72 ಕೋಟಿ ಒಟ್ಟು ₹16.85 ಕೋಟಿ ಆದಾಯ ನಿರೀಕ್ಷಿಸಲಾಗಿದೆ.

ಶಾಲಾ ವಿದ್ಯಾರ್ಥಿಗಳಿಗಾಗಿ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ₹1.10 ಲಕ್ಷ, ನೀರು ಸರಬರಾಜು ಮತ್ತು ನಿರ್ವಹಣೆಗೆ ₹24 ಲಕ್ಷ, ಕಾಯಂ ಪೌರ ಕಾರ್ಮಿಕರ ವೇತನ, ಸಣ್ಣ ಚರಂಡಿ, ಸೇತುವೆ, ಬೀದಿ ದೀಪ ನಿರ್ವಹಣೆ, ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಹಣ ಮೀಸಲಿಡಲಾಗಿದೆ.

ಮುಖ್ಯಾಧಿಕಾರಿ ಸುರೇಶ ಶೆಟ್ಟಿ, ಉಪಾಧ್ಯಕ್ಷೆ ಲಕ್ಷ್ಮಿ ಆದೆಪ್ಪ ನಾಯಕ, ಸದಸ್ಯರಾದ ಸಂದೀಪ ಪಾಟೀಲ, ಕೃಷ್ಣ ನಾಯಕ, ಎಚ್.ಮಾರ್ಕಪ್ಪ, ಹಸೇನಲಿ, ಮೌಲಸಾಬ್ ವರ್ಚಸ್, ಅಜಿತ ಹೊನ್ನಟಗಿ, ವೈ.ಭೂಪನಗೌಡ, ಅಮರೇಶ ಗಡ್ಲ, ಚನ್ನಪ್ಪ ಗಡ್ಲ, ಮಲ್ಲಿಕಾರ್ಜುನ, ಹನುಮಂತಿ, ಖಾಜಮ್ಮ, ಪುತ್ರಮ್ಮ, ಚಂದಮ್ಮ, ಬಸಮ್ಮ, ಸಂಘಟನಾಧಿಕಾರಿ ಹಂಪಯ್ಯ ಪಾಟೀಲ, ಜೆಇ ಹಸೇನಿ, ಲೆಕ್ಕಾಧಿಕಾರಿ ಭೀಮರಾಯ ಇದ್ದರು.

ಬೇಸಿಗೆಯಲ್ಲಿ ನೀರಿನ ಕೊರತೆಯಾಗದಂತೆ ಮತ್ತು ಮುಂದಿನ ಮಳೆಗಾಲದಲ್ಲಿ ವಾರ್ಡ್ಗಳ ಸ್ವಚ್ಛತೆ ಮತ್ತು ಚರಂಡಿ, ರಸ್ತೆಗಳ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಜಿ ಚೌದ್ರಿ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-32-1031863669

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.