ಜಾಲಹಳ್ಳಿ: ‘ಮೇ17 ರಂದು ಸಿರವಾರ ತಾಲ್ಲೂಕು ಕೇಂದ್ರದಲ್ಲಿ ವಾಲ್ಮೀಕಿ ಸಮಾಜದ ಒಕ್ಕೂಟದಿಂದ ಜಿಲ್ಲಾ ಮಟ್ಟದ ವಾಲ್ಮೀಕಿ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ತಾ.ಪಂ ಮಾಜಿ ಸದಸ್ಯ ಗೋವಿಂದರಾಜ ನಾಯಕ ತಿಂಪುರ ಹೇಳಿದರು.

ಶನಿವಾರ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ನಾಯಕ ಸಮಾಜದ ಪ್ರತಿಭಾವಂತ ಯುವಕರು, ಪಿಯು, ಎಸ್ಎಸ್ಎಲ್ಸಿಯಲ್ಲಿ ಗಣನೀಯ ಸಾಧನೆ ಮಾಡ ವಿದ್ರಾರ್ಥಿಗಳು, ಪ್ರಗತಿಪರ ರೈತರನ್ನು ಗೌರವಿಸುವ ಉದ್ದೇಶದಿಂದ ಜಿಲ್ಲಾಮಟ್ಟದ ವಾಲ್ಮೀಕಿ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಸಮಾವೇಶದಲ್ಲಿ ಸಮಾಜದ ಸ್ವಾಮೀಜಿಗಳು, ಹಾಲಿ ಹಾಗೂ ಮಾಜಿ ಚುನಾಯಿತ ಪ್ರತಿನಿಧಿಗಳು ಭಾಗವಹಿಸುತ್ತಾರೆ. ದೇವದುರ್ಗ, ಅರಕೇರ ಭಾಗದ ಸಮಾಜದ ಜನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು’ ಎಂದು ಕೋರಿದರು.

ಶಿವಪ್ಪ ನಾಯಕ ಕಕ್ಕಲದೊಡ್ಡಿ, ಚನ್ನಪ್ಪ ನಾಯಕ ಮ್ಯಾಕಲದೊಡ್ಡಿ, ರಂಗನಾಥ ನಾಯಕ, ಶ್ರೀಧರ್ ನಾಯಕ, ತಿಮ್ಮಣ್ಣ ನಾಯಕ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.