ಸಿರವಾರ: ‘ಕ್ಷಯ ಸಾಂಕ್ರಾಮಿಕ ರೋಗವಾಗಿದೆ. ಎಲ್ಲರೂ ಸಹಕಾರ ನೀಡಿ ನಿರಂತರವಾಗಿ ಆರೋಗ್ಯ ತಪಾಸಣೆ ಮತ್ತು ಅಗತ್ಯ ಚಿಕಿತ್ಸೆ ಪಡೆಯುವುದರಿಂದ ಕ್ಷಯ ರೋಗ ಮುಕ್ತ ಭಾರತ ಮಾಡಲು ಸಾಧ್ಯ’ ಎಂದು ಆಯುಷ್ ವೈದ್ಯಾಧಿಕಾರಿ ಸುನೀಲ ಸರೋದೆ ಹೇಳಿದರು.

ಪಟ್ಟಣದ ಸಮುದಾಯ ಅರೋಗ್ಯ ಕೇಂದ್ರದಲ್ಲಿ ವಿಶ್ವ ಕ್ಷಯ ರೋಗ ದಿನದ ಅಂಗವಾಗಿ ಬುಧವಾರ ನಡೆದ ಕ್ಷಯ ಮುಕ್ತ ಭಾರತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಆರೋಗ್ಯ ಇಲಾಖೆ ಜೊತೆಗೆ ವಿವಿಧ ಇಲಾಖೆಗಳ ಸಿಬ್ಬಂದಿ ಮತ್ತು ಸಮುದಾಯದ ಸಹಕಾರ ಇದ್ದಲ್ಲಿ ಕ್ಷಯ ರೋಗವನ್ನು ಬೇಗ ನಿರ್ಮೂಲನೆ ಮಾಡಬಹುದು’ ಎಂದರು.

ಕ್ಷಯ ರೋಗ ತಾಲ್ಲೂಕು ಮೇಲ್ವಿಚಾರಕ ಪ್ರೇಮ ಪ್ರಸಾದ ಮಾತನಾಡಿ,‘ರೋಗದ ಲಕ್ಷಣಗಳು ಕಂಡು ಬಂದರೆ ಕಫ ಪರೀಕ್ಷೆ ಹಾಗೂ ಎಕ್ಸ್ರೇ ಮಾಡಿಸುವ ಮೂಲಕ ಕ್ಷಯ ರೋಗವನ್ನು ಖಚಿತಪಡಿಸಿಕೊಂಡು ಆರು ತಿಂಗಳ ನಿರಂತರ ಚಿಕಿತ್ಸ ಪಡೆಯಬೇಕು’ ಎಂದರು.ಮಹತ್ವಾಕಾಂಕ್ಷಿ ತಾಲ್ಲೂಕು ಸಂಯೋಜಕಿ ಜ್ಞಾನ ಸುಂದರಿ, ಕ್ರೈ ಸಂಸ್ಥೆಯ ತಾಲ್ಲೂಕು ಸಂಯೋಜಕ ದೇವರಾಜ ಮಾತನಾಡಿದರು.

ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುರೇಶ, ವಲಯ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀದೇವಿ, ಫಾರ್ಮಾಸಿಸ್ಟ್ ಅಧಿಕಾರಿ ವಿದ್ಯಾರಾಣಿ ಸಿದ್ದಮ್ಮ, ಬಿ.ರಂಜನ್, ಅಂಗನವಾಡಿ ಕಾರ್ಯಕರ್ತೆಯರ ಮೇಲ್ವಿಚಾರಕಿ ನಿರ್ಮಲಾ ಸೇರಿದಂತೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-32-1642320937

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.