’ಶೋಷಣೆಮುಕ್ತ ಸಮಾಜ ಕ್ರಾಂತಿಕಾರಿಗಳ ಉದ್ದೇಶ’

7

’ಶೋಷಣೆಮುಕ್ತ ಸಮಾಜ ಕ್ರಾಂತಿಕಾರಿಗಳ ಉದ್ದೇಶ’

Published:
Updated:
Prajavani

ರಾಯಚೂರು: ಸ್ವಾತಂತ್ರ್ಯ ಸಂಗ್ರಾಮ ಕಾಲದ ಮಹಾನ್‌ ಕ್ರಾಂತಿಕಾರಿಗಳ ಉದ್ದೇಶವು ಶೋಷಣೆ ಮುಕ್ತ ಸಮಾಜ ನಿರ್ಮಾಣ ಮಾಡುವುದಾಗಿತ್ತು ಎಂದು ಉಪನ್ಯಾಸಕ ವೀರೇಶ ಕಡಗಂದೊಡ್ಡಿ ಹೇಳಿದರು.

ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಎಐಡಿಎಸ್‌ಒ ಜಿಲ್ಲಾ ಸಮಿತಿಯಿಂದ ಈಚೆಗೆ ಏರ್ಪಡಿಸಿದ್ದ ಎಐಡಿಎಸ್‌ಒ 65ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈಗ ರಾಜಕೀಯ ಅಧಿಕಾರ ಕೇವಲ ಕೆಲವರ ಸ್ವತ್ತಾಗಿದೆ. ಇಡೀ ದೇಶದ ಆಸ್ತಿಯನ್ನು ರಾಜಕಾರಣಿಗಳು ನಿಯಂತ್ರಿಸುತ್ತಿದ್ದಾರೆ. ಇದರಿಂದಾಗಿ ಶಿಕ್ಷಣ ಎಲ್ಲರಿಗೂ ಉಚಿತವಾಗಿ ಸಿಗದಂತಾಗಿದೆ. ಮತ್ತೊಮ್ಮೆ ವಿದ್ಯಾರ್ಥಿಗಳು ಸ್ವಾತಂತ್ರ್ಯ ಸಂಗ್ರಾಮದ ನೈಜ ಆಶೋತ್ತರಗಳಿಗಾಗಿ ಹೋರಾಡಬೇಕು  ಎಂದರು.

ಎಐಡಿಎಸ್‌ಒ ಅದ್ಯಕ್ಷ ಮಹೇಶ್ ಚೀಕಲಪರ್ವಿ ಮಾತನಾಡಿ, 1954 ರಲ್ಲಿ ಮಹಾನ್ ಮಾರ್ಕ್ಸವಾದಿ ಕಾ.ಶಿವದಾಸ ಘೋಷ ಅವರು ನೈಜ ಶಿಕ್ಷಣಕ್ಕಾಗಿ ಎಐಡಿಎಸ್‌ಒ ಸ್ಥಾಪಿಸಿದರು. ಪ್ರಜಾತಾಂತ್ರಿಕ, ಧರ್ಮನಿರಪೇಕ್ಷ, ವೈಜ್ಞಾನಿಕ, ಶಿಕ್ಷಣ ಧ್ಯೆಯದೊಂದಿಗೆ . ಪ್ರಾರಂಭವಾದ ಎಐಡಿಎಸ್‌ಒ ಇಂದು ದೇಶಾದ್ಯಂತ ಎಲ್ಲ ರಾಜ್ಯಗಳಲ್ಲಿ ಸಕ್ರಿಯವಾಗಿದೆ ಎಂದು ಹೇಳಿದರು.

ಯಾಸೀನ್ ಹಾಗೂ ಪೀರಸಬ್ ನಿರೂಪಿಸಿದರು. ಪ್ರಮೋದ ಕುಮಾರ್ ಜಿ. ಹೇಮಂತ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !