ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಮಧ್ಯೆ ರೈಲ್ವೆ ಜಿಎಂ ರಾಯಚೂರಿಗೆ ಭೇಟಿ

Last Updated 28 ಏಪ್ರಿಲ್ 2022, 14:41 IST
ಅಕ್ಷರ ಗಾತ್ರ

ರಾಯಚೂರು: ದಕ್ಷಿಣ ಮಧ್ಯೆ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅರುಣಕುಮಾರ್‌ ಜೈನ್‌ ಅವರು ರಾಯಚೂರು ರೈಲ್ವೆ ನಿಲ್ದಾಣಕ್ಕೆ ಗುರುವಾರ ಭೇಟಿನೀಡಿ, ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.

ಎಸ್ಕ್‌ಲೇಟರ್‌, ಲಿಫ್ಟ್‌, ಹಾಗೂ ಫುಟ್ ಓವರ್‌ ಬ್ರಿಡ್ಜ್‌ ಕಾಮಗಾರಿಗಳನ್ನು ಪರಿಶೀಲಿಸಿದರು. ಗುಡ್‌ಶೆಡ್‌ ಸ್ಥಳಾಂತರದ ಬಗ್ಗೆಯೂ ಮಾಹಿತಿ ಪಡೆದರು.

ರೈಲ್ವೆ ಗ್ರಾಹಕರ ಸಲಹಾ ಸಮಿತಿ ಸದಸ್ಯ ಬಾಬುರಾವ್‌ ಅವರು ಇದೇ ವೇಳೆ ಮನವಿಯೊಂದನ್ನು ಸಲ್ಲಿಸಿದರು. ರಾಯಚೂರು–ಕಾಕಿನಾಡ ನಡುವೆ ಹೊಸ ರೈಲು ಸಂಚಾರ ಸೇವೆ ಆರಂಭಿಸಬೇಕು. ಸುಕ್ಷೇತ್ರ ಮಂತ್ರಾಲಯ ರೈಲ್ವೆ ನಿಲ್ದಾಣದಲ್ಲಿ ಎಸ್ಕಲೇಟರ್‌ ಹಾಗೂ ಲಿಫ್ಟ್‌ ಅಳವಡಿಸುವುದಕ್ಕೆ ಕ್ರಮ ಕೈಗೊಳ್ಳಬೇಕು. ರಾಯಚೂರು–ಕಾಚಿಗೂಡ ರೈಲ್ವೆ ವೇಳೆಯನ್ನು ಬದಲಾವಣೆ ಮಾಡಿ, ಸಂಜೆ ಬದಲು ಬೆಳಿಗ್ಗೆ 6 ಗಂಟೆಗೆ ಓಡಿಸಬೇಕು. ರಾಯಚೂರು – ಕಲಬುರಗಿ ಮಧ್ಯೆ ಸಂಚರಿಸುವ ಡಿಮೊ ರೈಲ್ವೆಗೆ ಎರಡು ಕೋಚ್‌ಗಳನ್ನು ಅಳವಡಿಸಿ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ಹಿರಿಯ ನಾಗರಿಕರಿಗೆ ರಿಯಾಯಿತಿ ದರದಲ್ಲಿ ಟಿಕೆಟ್‌ ವಿತರಿಸುವ ವ್ಯವಸ್ಥೆ ಮರು ಜಾರಿಗೊಳಿಸಬೇಕು ಎಂದು ಕೇಳಿಕೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT