ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಪಿ ಕಚೇರಿ ಸೀಲ್‌ಡೌನ್‌

Last Updated 28 ಜುಲೈ 2020, 14:49 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲಾ ವೈರ್‌ಲೆಸ್‌ ಕಚೇರಿ ಹಾಗೂ ಬೆರಳಚ್ಚು ವಿಜ್ಞಾನ ಕಚೇರಿಯಲ್ಲಿ ಇಬ್ಬರಿಗೆ ಕೋವಿಡ್‌ ದೃಢವಾಗಿದ್ದರಿಂದ, ಎಸ್‌ಪಿ ಕಚೇರಿ ಸೇರಿ ಆವರಣದಲ್ಲಿರುವ ಎಲ್ಲ ಕಚೇರಿಗಳನ್ನು ಮಂಗಳವಾರ ಸ್ಯಾನಿಟೈಜ್‌ಗೊಳಿಸಿ ಸೀಲ್‌ಡೌನ್‌ ಮಾಡಲಾಗಿದೆ.

‘ವೈರ್‌ಲೆಸ್‌ ಕಚೇರಿಯ ಒಬ್ಬರು ಪಿಎಸ್‌ಐ ಹಾಗೂ ಫಿಂಗರ್‌ಪ್ರಿಂಟ್‌ ಕಚೇರಿ ಹೆಡ್‌ ಕಾನ್‌ಸ್ಟೆಬಲ್‌ವೊಬ್ಬರಿಗೆ ಕೋವಿಡ್‌ ಸೋಂಕು ತಗುಲಿದೆ. ಈ ಕಾರಣಕ್ಕಾಗಿ ಕಚೇರಿಗಳನ್ನು ಸ್ಯಾನಿಟೈಜ್‌ ಮಾಡಿಸಲಾಗಿದೆ. ಬುಧವಾರದಿಂದ ಮತ್ತೆ ಕಾರ್ಯಾರಂಭ ಮಾಡಲಿವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT