ನೇರ ಪೋನ್ ಇನ್ ಕಾರ್ಯಕ್ರಮದಲ್ಲಿ ದೂರು ಸಲ್ಲಿಸಿ: ಎಸ್‌ಪಿ

ಬುಧವಾರ, ಜೂಲೈ 24, 2019
24 °C

ನೇರ ಪೋನ್ ಇನ್ ಕಾರ್ಯಕ್ರಮದಲ್ಲಿ ದೂರು ಸಲ್ಲಿಸಿ: ಎಸ್‌ಪಿ

Published:
Updated:
Prajavani

ರಾಯಚೂರು: ಸಾರ್ವಜನಿಕರು ತಮ್ಮ ಸಮಸ್ಯೆಗಳಿದ್ದರೆ ಪ್ರತಿ ತಿಂಗಳು 1 ನೇ ದಿನಾಂಕದಂದು ನಡೆಯುವ ನೇರ ಪೋನ್ ಇನ್ ಕಾರ್ಯಕ್ರಮದಡಿ ದೂರು ಸಲ್ಲಿಸಬಹುದು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಸಿ.ಬಿ ವೇದಮೂರ್ತಿ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸೋಮವಾರ ಮಧ್ಯಾಹ್ನ 12 ರಿಂದ 1 ಗಂಟೆವರೆಗೆ ನಡೆದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲೆಯ ವಿವಿಧ ಭಾಗಗಳಿಂದ ಒಂಭತ್ತು ಜನ ಸಾರ್ವಜನಿಕರು ಕರೆ ಮಾಡಿ ಅಹವಾಲುಗಳನ್ನು ತಿಳಿಸಿದರು. ಸಿರವಾರ ಗ್ರಾಮದಲ್ಲಿ ಅಕ್ರಮ ಚಟುವಟಿಕೆಗಳಾದ ಮಟಕಾ, ಜೂಟಾಟ ನಿಯಂತ್ರಿಸುವ ಬಗ್ಗೆ, ಸ್ಟೇಷನ್ ಏರಿಯಾದಲ್ಲಿ ಮನೆ ಕಟ್ಟಿಸಲು ಸಂಬಂಧಿಗಳು ತೊಂದರೆ ಮಾಡುತ್ತಿರುವ ಬಗ್ಗೆ, ದೇವದುರ್ಗ ಪಟ್ಟಣದಲ್ಲಿ ಕ್ರಿಕೆಟ್ ಬೆಟ್ಟಿಂಗ್ ವಿರುದ್ಧ ಕಾನೂನು ಕ್ರಮ ಜರುಗಿಸುವ ಬಗ್ಗೆ, ಕವಿತಾಳ ಗ್ರಾಮದಲ್ಲಿ ರಸ್ತೆ ಅಗಲೀಕರಣ ಬಗ್ಗೆ, ರಾಯ ಚೂರು ಪಟ್ಟಣದ ಕಾಯಿಪಲ್ಲೆ ಮಾರ್ಕೆಟ್‌ನಲ್ಲಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗುತ್ತಿರುವ ಬಗ್ಗೆ, ಕೆರೆಬು ದೂರು ಗ್ರಾಮದಲ್ಲಿ ಚರಂಡಿ ಮತ್ತು ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ, ಸಿಂಧನೂರು ತಾಲೂಕಿನ ತೋಳದಿನ್ನಿ ಗ್ರಾಮದಲ್ಲಿ ಜಮೀನು ವಿವಾದ ಬಗ್ಗೆ ಮತ್ತು ಸಾದಾಪೂರ ಗ್ರಾಮದಲ್ಲಿ ಭಟ್ಟಿ ಸಾರಾಯಿ ತಯಾರಿಸುವಿಕೆ ಅಹವಾಲುಗಳು ಸಲ್ಲಿಕೆಯಾದವು.

ನಿಯಮಾನುಸಾರ ಕಾನೂನು ಕ್ರಮ ಜರುಗಿಸಿ ವರದಿ ಸಲ್ಲಿಸುವಂತೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ಸೂಚಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !