ವಿಶೇಷ 23 ಸಖಿ ಮತಗಟ್ಟೆಗಳು

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542

ವಿಶೇಷ 23 ಸಖಿ ಮತಗಟ್ಟೆಗಳು

Published:
Updated:

ರಾಯಚೂರು: ಲೋಕಸಭಾ ಚುನಾವಣೆಗೆ ರಾಯಚೂರು ಕ್ಷೇತ್ರದ ವ್ಯಾಪ್ತಿಯಲ್ಲಿ 23 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ರಾಯಚೂರು ಗ್ರಾಮೀಣದಲ್ಲಿ ದೇವಸೂಗೂರು ಗ್ರಾಮ ಪಂಚಾಯಿತಿ ಕಟ್ಟಡ ಮತ್ತು ಯರಗೇರಾ ಜಿಎಚ್‍ಎಸ್ ನೂತನ ಕಟ್ಟಡದ 2 ಮತಗಟ್ಟೆಗಳು, ರಾಯಚೂರು ನಗರದಲ್ಲಿ ಜಿಲ್ಲಾ ಪಂಚಾಯಿತಿ, ರಾಜ್‌ ಎಂಜಿನಿಯರಿಂಗ್‌ ಸಬ್‌ ಸೆಕ್ಷನ್‌ ಗಂಜ ಏರಿಯಾದಲ್ಲಿನ ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಕಚೇರಿ, ಎಪಿಎಂಸಿ ಆಡಳಿತ ಭವನ, ಆರ್‌ಡಿಸಿಸಿ ಬ್ಯಾಂಕ್, ಪಿಡಬ್ಲ್ಯೂಡಿ ಅಸಿಸ್ಟಂಟ್‌ ಎಕ್ಸಿಕ್ಯೂಟಿವ್ ಎಂಜಿನಿಯರ್ ಕಚೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ, ಬೆಸ್ತವಾರ ಪೆಟೆಯ ಕರ್ನಾಟಕ ಬ್ಯಾಂಕ್, ವಿಜಯಬ್ಯಾಂಕ್ ಒಟ್ಟು 8 ಸಖಿ ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ.

ಮಾನ್ವಿಯ ಎಪಿಎಂಸಿಯ ರೈತ ಭವನ ಹಾಗೂ ರಾಜೀವ್‌ ಗಾಂಧಿ ಜಿಮ್ ಸೆಂಟರ್ ಮತಗಟ್ಟೆಗಳು, ದೇವದುರ್ಗದ ಸರ್ಕಾರಿ ಪ್ರಾಥಮಿಕ ಶಾಲೆ ಮ್ಯಾದರಗೊಳ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಲದಕಲ್ ಮತಗಟ್ಟೆಗಳು ಹಾಗೂ ಲಿಂಗಸೂಗೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಟ್ಟಿ ಟಿಎಂಸಿ ಕಚೇರಿಯ ಈಸ್ಟ್ ವಿಂಗ್ ಚಾವಣಿ ಮತ್ತು ಮುದಗಲ್‌ ನಾಡ ಕಾರ್ಯಾಲಯದಲ್ಲಿ ಸಖಿ ಮತಗಟ್ಟೆಗಳಿವೆ.

ಸುರಪುರದ ಆನಂದ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಎರಡು ಮತಗಟ್ಟೆಗಳು, ಶಹಾಪೂರದ ವಿದ್ಯಾನಗರದ ಹಿರಿಯ ಪ್ರಾಥಮಿಕ ಶಾಲೆ ಹೊಸ ಕಟ್ಟಡ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಹೊಸ ಕಟ್ಟಡ ಉರ್ದು ಶಾಲೆಯ ಮತಗಟ್ಟೆಗಳು. ಯಾದಗಿರಿಯಲ್ಲಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮುಸ್ಲಿಂಪುರ ಮತ್ತು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಕೋಲಿವಾಡದಲ್ಲಿನ ಮತಗಟ್ಟೆಗಳು ಸಖಿ ಮತಗಟ್ಟೆಗಳಾಗಿವೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !