ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಕ್ಷ ಸಾಧನೆಗೆ ಗಿರಿಯಮ್ಮನ ಕೀರ್ತನೆ ಪ್ರೇರಕ: ಡಾ.ಪದ್ಮಜಾ ದೇಸಾಯಿ

Last Updated 20 ಜನವರಿ 2020, 16:37 IST
ಅಕ್ಷರ ಗಾತ್ರ

ರಾಯಚೂರು: ಲೌಕಿಕ ಪ್ರಪಂಚದ ಆಸೆ, ಪ್ರಲೋಭನೆಗಳನ್ನೆಲ್ಲ ಬದಿಗೊತ್ತಿ ಮೋಕ್ಷ ಸಾಧನೆಯ ಮಾರ್ಗವನ್ನು ಹರಿಭಕ್ತೆ ಹೆಳವನಕಟ್ಟೆ ಗಿರಿಯಮ್ಮ ಅವರು ತಮ್ಮ ಕೀರ್ತನೆಗಳ ಮೂಲಕ ಬೋಧಿಸಿದ್ದಾರೆ ಎಂದು ಯರಗೇರಾ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕಿ ಡಾ.ಪದ್ಮಜಾ ದೇಸಾಯಿ ಹೇಳಿದರು.

ನಗರದ ಕರ್ನಾಟಕ ಸಂಘದ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಹರಿದಾಸ ನಮನ ಗಾಯನ ಮಾಲಿಕೆಯ 11 ನೇ ಆವೃತ್ತಿಯಲ್ಲಿ ಹೆಳವನಕಟ್ಟೆ ಗಿರಿಯಮ್ಮ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಉತ್ಕಟ ಭಕ್ತಿಯನ್ನು ಹೊಂದಿದ್ದ ಗಿರಿಯಮ್ಮ ಭಗನವಂತನ ನಾಮಸ್ಮರಣೆ ಮತ್ತು ಆರಾಧನೆಯಲ್ಲಿ ಮುಳುಗಿದ್ದರು. ಕರ್ನಾಟಕದ ಮೀರಾಬಾಯಿ ಎಂದು ಅವರನ್ನು ಧಾರಾಳವಾಗಿ ಕರೆಯಬಹುದಾಗಿದೆ ಎಂದರು.

ಹರಪನಹಳ್ಳಿ ಭೀಮವ್ವ ಅವರು ಜೀವನ ಸಾಧನೆ ಕುರಿತು ಶಾಂತಾ ಕುಲಕರ್ಣಿ ಮಾತನಾಡಿದರು.

ಸಾಹಿತಿ ಬಾಬು ಭಂಡಾರಿಗಲ್‌ ಮಾತನಾಡಿದರು. ಸಂಗೀತಗಾರ ಅಂಬಯ್ಯ ನುಲಿ, ಉಪನ್ಯಾಸಕಿ ಡಾ.ಶೀಲಾ ದಾಸ್‌ ಮಾತನಾಡಿದರು. ಕೆ.ಕರಿಯಪ್ಪ ಮಾಸ್ತರ್‌ ಕೀರ್ತನೆಗಳನ್ನು ಹಾಡಿದರು.

ಸಂಗೀತ ಶಾಲೆಯ ಪ್ರಾಚಾರ್ಯ ಅಪೂರ್ವ ಅವರ ನಿರ್ದೇಶನದಲ್ಲಿ ಸಂಜನಾ, ಪ್ರಗತಿ, ಗೌತಮಿ, ವೈಷ್ಣವಿ, ಮೇಘಾ, ಅನನ್ಯಾ, ಸ್ಪಂದನಾ ಅವರಿಂದ ಕೀರ್ತನೆಗಳ ಗಾಯನ ನಡೆಯಿತು.

ಕರ್ನಾಟಕ ಸಂಘದ ಅಧ್ಯಕ್ಷ ನರಸಣ್ಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮುರಳೀಧರ ಕುಲಕರ್ಣಿ ಸ್ವಾಗತಿಸಿದರು. ಡಾ.ರಾಜಶ್ರೀ ಕಲ್ಲೂರಕರ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT