‘ಸದೃಢ ದೇಹ, ಮನಸ್ಸು ನಿರ್ಮಾಣದಲ್ಲಿ ಕ್ರೀಡೆ ಪ್ರಮುಖ ಪಾತ್ರ’

7

‘ಸದೃಢ ದೇಹ, ಮನಸ್ಸು ನಿರ್ಮಾಣದಲ್ಲಿ ಕ್ರೀಡೆ ಪ್ರಮುಖ ಪಾತ್ರ’

Published:
Updated:
Deccan Herald

ರಾಯಚೂರು: ವ್ಯಕ್ತಿಯ ಸದೃಢ ದೇಹ ಹಾಗೂ ಮನಸ್ಸು ನಿರ್ಮಾಣ ಮಾಡುವಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸದಸ್ಯ ವೈ.ಎಂ.ಮುರಳಿಧರ ಹೇಳಿದರು.

ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಸೇಂಟ್ ಥಾಮಸ್ ಕಾಲೇಜಿನಿಂದ ಆಯೋಜಿಸಿದ್ದ ಗುಲಬರ್ಗಾ ವಿಶ್ವವಿದ್ಯಾಲಯ ಜಿಲ್ಲಾ ಅಂತರವಲಯ 38ನೇ ಬ್ಯಾಡ್ಮಿಂಟನ್‌ ಕ್ರೀಡಾಕೂಟದಲ್ಲಿ ಮಾತನಾಡಿದರು.

ಕಾಲೇಜಿನ ಕಾರ್ಯದರ್ಶಿ ಥಾಮಸ್ ಬೆಂಜಮಿನ್ ಮಾತನಾಡಿ, ಆರೋಗ್ಯವಂತ ವ್ಯಕ್ತಿ ದೇಶದ ಆಸ್ತಿಯಾಗಿದ್ದು, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.

ಪ್ರಾಚಾರ್ಯ ತಿಪ್ಪಣ್ಣ ಮಾತನಾಡಿ, ಜಾಗತಿಕ ಮಟ್ಟದ ಕ್ರೀಡೆಯಲ್ಲಿ ಭಾರತ ಸ್ಥಾನ ಮಾನ ಹೊಂದಬೇಕಾದರೆ ಸರ್ಕಾರಗಳು ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.

ಜಿಲ್ಲಾ ಬ್ಯಾಡಮಿಂಟನ್ ಕಾರ್ಯದರ್ಶಿ ನಾಗರಾಜ ಗಡ್ಡಾಲೆ ಉದ್ಘಾಟಿಸಿದರು. ಮಾಜಿ ಬ್ಯಾಡಮಿಂಟನ್ ಆಟಗಾರರಾದ ರಾಕೇಶ ಎಸ್.ಸಂಪತ್, ಸುದರ್ಶನ ಬೋಹರ , ವೈ.ಸುಮಿತ್, ಕಿಶೋರ್, ವೈ.ಎಂ.ಅನೋಜ್ ಅರವಿಂದ್ ರಾಹುಲ ಅವರನ್ನು ಸನ್ಮಾನಿಸಲಾಯಿತು. ದೇವರೆಡ್ಡಿ ಸಣ್ಣಗೌಡ ಪ್ರತಿಜ್ಞಾವಿಧಿ ಬೋಧಿಸಿದರು.

ಪುರುಷರ ವಿಭಾಗದಲ್ಲಿ ಸೆಂಟ್ ಥಾಮಸ್ ಕಾಲೇಜಿನ ತಂಡ ಪ್ರಥಮ ಸ್ಥಾನ ಗಳಿಸಿತು. ಬಿಆರ್‌ಬಿ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು. ಮಹಿಳಾ ವಿಭಾಗದಲ್ಲಿ ಬಿಆರ್‌ಬಿ ಕಾಲೇಜು ಪ್ರಥಮ, ಎಲ್‌ವಿಡಿ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು.

ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸ್ವಾಮಿ ಇದ್ದರು, ಮಹೆಬೂಬವಲಿ ದಿನ್ನಿ ವಂದಿಸಿದರು. ಉಪನ್ಯಾಸಕ ಸುರೇಶ ಸಾಲಿಮಠ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !