ರಾಯಚೂರು: ಪುರುಷರ ಸಾಧನೆಗಳಿಗೆ ಮಹಿಳೆಯರ ಸಹಕಾರವಿರುತ್ತದೆ ಎಂದು ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ನ ರಾಜ್ಯ ಘಟಕದ ಕಾರ್ಯದರ್ಶಿ ಶ್ರೀದೇವಿ ಆರ್. ವಿ. ನಾಯಕ ಹೇಳಿದರು.

ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕಲಾಸಂಕುಲ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ಕುಟುಂಬದಲ್ಲಿ ಮಹಿಳೆಯರನ್ನು ಗೌರವಿಸುವುದು, ಪ್ರತಿಯೊಬ್ಬ ಪುರುಷನ ಜವಾಬ್ದಾರಿ. ಮಹಿಳೆ ತಾಯಿಯಾಗಿ ಮಡದಿಯಾಗಿ ಸಹೋದರಿಯಾಗಿ ಪ್ರತಿಯೊಬ್ಬರ ಜೀವನದಲ್ಲಿ ಇರುವರು. ಮಹಾನ್ ಸಾಧನೆಗಳಿಗೆ ಮಹಿಳೆಯರೇ ಸ್ಫೂರ್ತಿ ಆಗಿರುತ್ತಾರೆ ಎಂದು ಅಭಿಪ್ರಾಯಪಟ್ಟರು.

ದೆಹಲಿಯಲ್ಲಿ ಮೊದಲ ಬಾರಿಗೆ ಮೆಟ್ರೊ ರೈಲನ್ನು ನಡೆಸಿದ ಕನ್ನಡತಿ ಆಶಾಲತಾ ಮಾತನಾಡಿ, ಮಹಿಳೆಯರು ನಮ್ಮ ದೇಶದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿದ್ದು. ಅದು ವಿಶೇಷವಾಗಿದೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಮಹಿಳೆಯರು ಸಬಲರಾಗಬೇಕು ಎಂದು ಹೇಳಿದರು.

ನಗರಸಭೆಯ ಮಾಜಿ ಸದಸ್ಯ ನರಸಪ್ಪ ಯಕ್ಲಾಸ್ಪುರ, ಜಿಲ್ಲಾ ಕಾರಾಗೃಹದ ಅಧೀಕ್ಷಕೆ ಅನಿತಾ ಹಿರೇಮನಿ ಮಾತನಾಡಿದರು.

ನಗರಸಭೆ ಮಾಜಿ ಉಪಾಧ್ಯಕ್ಷ ಕೆ ಪಂಪಾಪತಿ, ಕಲಾ ಸಂಕುಲ ಸಂಸ್ಥೆಯ ಅಧ್ಯಕ್ಷೆ ರೇಖಾ ಬಡಿಗೇರ, ಫಾತಿಮಾ ಹುಸೇನ್, ಕಲ್ಯಾಣ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಟ್ರಸ್ಟಿನ ಗೌರವ ಅಧ್ಯಕ್ಷ ಬಿ. ಬಸವರಾಜ, ರಾಜಶೇಖರ್ ದಿನ್ನಿ, ಅಧ್ಯಕ್ಷ ಅಯ್ಯಣ್ಣ ವಡವಾಟಿ, ಪ್ರಧಾನ ಕಾರ್ಯದರ್ಶಿ ಡಿ. ಶ್ರೀನಿವಾಸ್, ಉಪಾಧ್ಯಕ್ಷ ಸಂಗಮೇಶ್ ಭಂಡಾರಿ, ನರಸಿಂಹಲು ತೋರ್ಸಿ, ಸಂಘಟನಾ ಕಾರ್ಯದರ್ಶಿ ರಮೇಶ್ ಉಪ್ರಾಳ, ಆಲಂಗಣಿ ಗಬ್ಬೂರು, ಸುರೇಶ್ ಸಂಗಾಪುರ ಉಪಸ್ಥಿತರಿದ್ದರು.

ಕಲಾವತಿ ದಯಾನಂದ ಕನ್ನಡ ಗೀತೆಗಳನ್ನು ಹಾಡಿದರು. ರಾಜಸಾಬ್ ನಿರೂಪಿಸಿದರು. ಮಾರುತಿ ಬಡಿಗೇರ ಸ್ವಾಗತಿಸಿದರು.

ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕಿಯರಿಗೆ ಮಹಿಳಾ ಸಾಧಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.