ಮಸ್ಕಿ: ದಕ್ಷಿಣ ಭಾರತದ ಪ್ರಸಿದ್ಧ ಪವಿತ್ರ ಕ್ಷೇತ್ರವಾದ ಶ್ರೀಶೈಲಕ್ಕೆ ಪಾದಯಾತ್ರೆ ಕೈಗೊಂಡಿರುವ ಭಕ್ತರ ಸ್ವಾಗತಕ್ಕೆ ಮಸ್ಕಿ ಪಟ್ಟಣ ಸಜ್ಜುಗೊಂಡಿದೆ.

ನೆರೆಯ ವಿಜಯಪುರ, ಬಾಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಈ ಮಾರ್ಗವಾಗಿ ಶ್ರೀಶೈಲ ಕ್ಷೇತ್ರದತ್ತ ಸಾಗುತ್ತಿದ್ದಾರೆ.

ಪಟ್ಟಣ ಪ್ರವೇಶಿಸುವ ಹೆದ್ದಾರಿಯಲ್ಲಿ ಭಕ್ತರಿಗಾಗಿ ಭವ್ಯ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿದೆ. ದಾರಿಯುದ್ದಕ್ಕೂ ದಾಸೋಹ ಕೇಂದ್ರಗಳು, ವಿಶ್ರಾಂತಿ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಅರವಟಿಗೆಗಳನ್ನು ಆರಂಭಿಸಲಾಗಿದ್ದು, ಪಾದಯಾತ್ರಿಗಳ ಸೌಲಭ್ಯಕ್ಕೆ ವಿಶೇಷ ಗಮನ ಹರಿಸಲಾಗಿದೆ. ಆರೋಗ್ಯ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ವಿವಿಧೆಡೆ ತಾತ್ಕಾಲಿಕ ಆರೋಗ್ಯ ಶಿಬಿರಗಳನ್ನು ತೆರೆಯಲಾಗಿದೆ. ವೈದ್ಯರು ಮತ್ತು ಸಿಬ್ಬಂದಿ ಭಕ್ತರಿಗೆ ತಕ್ಷಣದ ಚಿಕಿತ್ಸೆ ಹಾಗೂ ಸಲಹೆ ನೀಡುತ್ತಿದ್ದಾರೆ.

ಹಳೆ ಕ್ಯಾತನಟ್ಟಿ, ಮೌನೇಶ್ವರ ದೇವಸ್ಥಾನ ಹತ್ತಿರ, ಮುದ್ದುಮಲ್ಲಯ್ಯನ ದೇವಸ್ಥಾನ, ನೀಲಕಂಠೇಶ್ವರ ದೇವಾಲಯ ಮತ್ತು ಎಡದಂಡೆ ಕಾಲುವೆ ಭಾಗಗಳಲ್ಲಿ ಪ್ರಮುಖವಾಗಿ ದಾಸೋಹ ಕೇಂದ್ರಗಳು ಮತ್ತು ಚಿಕಿತ್ಸಾ ಶಿಬಿರಗಳು ಕಾರ್ಯನಿರ್ವಹಿಸುತ್ತಿದ್ದು ಸ್ಥಳೀಯ ಸಂಘ-ಸಂಸ್ಥೆಗಳು ಹಾಗೂ ಸ್ವಯಂಸೇವಕರು ಭಕ್ತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮಿಲ್ಗಳು, ಮನೆಗಳಲ್ಲಿಯೂ ಸಹ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಹಾಗೂ ಹಾರೈಕೆ ಮಾಡಲಾಗುತ್ತಿದೆ. ಗುರುವಾರದಿಂದಲೇ ಭಕ್ತರ ಪ್ರವೇಶ ಆರಂಭವಾಗಿದ್ದು, ಮುಂದಿನ ವಾರದವರೆಗೆ ಈ ಮಾರ್ಗವಾಗಿ ಪಾದಯಾತ್ರೆ ಮುಂದುವರಿಯಲಿದೆ.

ಅಂದಾಜು ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಈ ಮಾರ್ಗವಾಗಿ ಶ್ರೀಶೈಲಕ್ಕೆ ತೆರಳುವ ನಿರೀಕ್ಷೆಯಿದೆ. ಪ್ರಮುವಾಗಿ ಅಶೋಕ ವೃತ್ತದಲ್ಲಿ ಹೆಚ್ಚಿನ ಜನ ಸಂದಣಿಯಾಗುವ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಿ ಭಕ್ತರಿಗೆ ಅನುಕೂಲ ಮಾಡುವುದಾಗಿ ಸಬ್ ಇನ್ಸ್ಪೆಕ್ಟರ್ ರಂಗಯ್ಯ ತಿಳಿಸಿದ್ದಾರೆ.

ಪಟ್ಟಣದಲ್ಲಿ ಹೆಚ್ಚಿನ ದೂಳು ಇರುವ ಕಾರಣ ಸ್ವಯಂ ಸೇವಕರು, ಟ್ರ್ಯಾಕ್ಟರ್ ಮಾಲೀಕರು ಸ್ವಯಂಪ್ರೇರಿತರಾಗಿ ರಸ್ತೆ ಮೇಲೆ ನೀರು ಹಾಕಿ ದೂಳು ನಿಯಂತ್ರಣಕ್ಕೆ ಮುಂದಾಗಿದ್ದು ಅಲ್ಲಲ್ಲಿ ಕಂಡುಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.