ಶನಿವಾರ, ಆಗಸ್ಟ್ 24, 2019
28 °C
ಬಿಡಾಡಿ ದನಗಳನ್ನು ತೆಗೆದುಕೊಂಡು ಹೋಗಲು ಅಗಸ್ಟ್ 5 ಕೊನೆಯ ದಿನ

ಮಾಲೀಕರು ಬರದಿದ್ದರೆ ಗೋಶಾಲೆಗೆ ದನಕರು: ಎಸ್‌ಪಿ

Published:
Updated:
Prajavani

ರಾಯಚೂರು: ನಗರದಲ್ಲಿ ಬಿಡಾಡಿ ದನಗಳ ಹಾವಳಿ ತಡೆಯಲು ಜುಲೈ 24ರಿಂದ ನಗರಸಭೆ ಅಧಿಕಾರಿಗಳ ಸಹಯೋಗದಲ್ಲಿ ಆರಂಭಿಸಿರುವ ಕಾರ್ಯಾಚರಣೆಯಿಂದ ಇಲ್ಲಿಯವರೆಗೂ 417 ಬಿಡಾಡಿ ದನಗಳನ್ನು ಹಿಡಿದಿಡಲಾಗಿದೆ. ಮಾಲೀಕರು ಅವುಗಳನ್ನು ಪಡೆದುಕೊಳ್ಳಲು ಅಗಸ್ಟ್ 5 ಕೊನೆಯ ದಿನ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ತಿಳಿಸಿದ್ದಾರೆ.

ಕಾರ್ಯಾಚರಣೆ ಮೂಲಕ  ಹಿಡಿದಿರುವ ದನಗಳಲ್ಲಿ 67 ದನಗಳನ್ನು ಸಂಬಂಧಪಟ್ಟ ಮಾಲೀಕರು ದಂಡವನ್ನು ಪಾವತಿಸಿ ವಾಪಸ್ ತೆಗೆದುಕೊಂಡು ಹೋಗಿದ್ದಾರೆ. ಇನ್ನುಳಿದ 350 ದನಕರುಗಳನ್ನು ಸುರಕ್ಷಿತವಾಗಿ ಹಿಡಿದಿಡಲಾಗಿದೆ. ರಾಯಚೂರಿನ ಮಹಿಳಾ ಸಮಾಜದ ಮೈದಾನದಲ್ಲಿ 109 ದನಗಳು, ಕರ್ನಾಟಕ ಸಂಘದ ಆವರಣದಲ್ಲಿ 200 ದನಗಳು ಮತ್ತು ರೈತ ಭವನ ಅವರಣದಲ್ಲಿ 41 ದನಗಳನ್ನು ಹಿಡಿದಿಡಲಾಗಿದೆ ಎಂದು ತಿಳಿಸಿದ್ದಾರೆ.

ಸಂಬಂಧಪಟ್ಟ ಮಾಲೀಕರು ದಂಡ ಪಾವತಿಸಿ, ವಾಪಸ್ ತೆಗೆದುಕೊಂಡು ಹೋಗಲು ಆಗಸ್ಟ್ 5 ಕೊನೆಯ ದಿನವಾಗಿದೆ. ಮಾಲೀಕರು ತೆಗೆದುಕೊಂಡು ಹೋಗದಿದ್ದರೆ ಆಗಸ್ಟ್ 6ರಂದು ಎಲ್ಲ ಬಿಡಾಡಿ ದನಗಳನ್ನು ಗೋಶಾಲೆಗೆ ಒಪ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

ಇವರೆಗೂ ದಂಡ ಸಂಗ್ರಹಿಸಿದ ಮೊತ್ತ ₹26 ಸಾವಿರ ರಷ್ಟಾಗಿದೆ ಎಂದು ತಿಳಿಸಲಾಗಿದೆ.

Post Comments (+)