ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಮವಹಿಸಿದರೆ ಗೆಲವು ನಿಶ್ಚಿತ: ಪ್ರೊ.ನುಸರತ್ ಫಾತಿಮಾ

Last Updated 12 ನವೆಂಬರ್ 2019, 16:02 IST
ಅಕ್ಷರ ಗಾತ್ರ

ರಾಯಚೂರು:ಅತಿ ಕಡಿಮೆ ಸಮಯದಲ್ಲಿ ಯರಗೇರಾ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು ರನ್ನರ್ ಅಪ್ ಸ್ಥಾನವನ್ನು ಗಳಿಸಿದ್ದು ಶ್ಲಾಘನೀಯ. ಮುಂದಿನ ವರ್ಷದಲ್ಲಿ ಹೆಚ್ಚುಶ್ರಮವಹಿಸಿ ಅಭ್ಯಾಸ ಮಾಡಿದರೆಪ್ರಥಮ ಸ್ಥಾನ ಪಡೆಯುತ್ತೀರಿ ಎಂದು ಯರಗೇರಾ ಸ್ನಾತಕೋತ್ತರ ಕೇಂದ್ರದವಿಶೇಷಾಧಿಕಾರಿ ಪ್ರೊ.ನುಸರತ್ ಫಾತಿಮಾ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದಯದಲ್ಲಿ ಮೂರು ದಿನಗಳ ಕಾಲ ಜರುಗಿದ ಅಂತರ್ ಕಾಲೇಜು ಯುವಜನೋತ್ಸವದಲ್ಲಿ ಯರಗೇರಾಪಿಜಿ ಸೆಂಟರ್‌ನ ವಿದ್ಯಾರ್ಥಿಗಳು ತಮ್ಮ ವೇದಿಕೆ ಕಾರ್ಯಕ್ರಮಗಳಲ್ಲಿ ಪ್ರತಿಭೆ ಪ್ರದರ್ಶಿಸಿಸಮಧಾನಕರಸ್ಥಾನವನ್ನು ಪಡೆದಿದ್ದಾಕ್ಕಾಗಿ ಮಂಗಳವಾರ ಯರಗೇರಾ ಸ್ನಾತಕೋತ್ತರ ಕೇಂದ್ರದ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಯುವಜನೋತ್ಸವದಲ್ಲಿ ಕಲಬುರ್ಗಿ ಬೀದರ್, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ 600ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ ಯುವಜನೋತ್ಸವದಲ್ಲಿ ಸಾಂಸ್ಕೃತಿಕ ವೇದಿಕೆ ಕಾರ್ಯಕ್ರಮದಲ್ಲಿಅಂತರ್ ವಲಯ ಮಟ್ಟಕ್ಕೆ ಆಯ್ಕೆಯಾದವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಆಶಿಸುತ್ತೇನೆ ಎಂದರು.

ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಡಾ.ಜಿ.ಎಸ್.ಬಿರಾದರ ಮಾತನಾಡಿ, ಈ ಬಾರಿಯ ಯುವಜನೋತ್ಸವದ ರನ್ನರ್ ಅಪ್ ಪ್ರಶಸ್ತಿ ತಂದಿರುವುದು ನಮ್ಮ ಸ್ನಾತಕೋತ್ತರ ಕೇಂದ್ರದ ಹಿರಿಮೆ ಹೆಚ್ಚಿಸಿದಂತಾಗಿದೆ. ವಿಶ್ವವಿದ್ಯಾಲಯದ ಮುಂದಿನ ಎಲ್ಲಾ ಸ್ಪರ್ಧೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿಯನ್ನು ತರುವಂತಾಗಲಿ ಎಂದು ಹರಸಿದರು.

ಇಂಗ್ಲಿಷ್‌ ವಿಭಾಗದ ಅತಿಥಿ ಉಪನ್ಯಾಸಕ ಅನಿಲ್ ಅಪ್ರಾಳ ಮಾತನಾಡಿ, ವಿದ್ಯಾರ್ಥಿಗಳ ಪರಿಶ್ರಮವೇ ಇವತ್ತಿನ ಗೆಲುವಿಗೆ ಮುಖ್ಯ ಕಾರಣ ಎಂದರು.

ಯುವಜನೋತ್ಸವದಲ್ಲಿ ಭಾಗವಹಿಸಿದಂತಹ ವಿದ್ಯಾರ್ಥಿಗಳು ತಮ್ಮ ಅನುಭಗಳನ್ನು ಹಂಚಿಕೊಂಡರು. ಸಲೀಂ ನಿರೂಪಿಸಿದರು, ಜ್ಯೋತಿ, ಪೂರ್ಣಿಮ ಪ್ರಾರ್ಥಿಸಿದರೆ, ರಾಖಿ ಸ್ವಾಗತಿಸಿದರು, ಯಾಸೀನ್ ಅಹಮದ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT