ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ಅಧ್ಯಯನದಿಂದ ಮಾತ್ರ ಯಶಸ್ವಿ

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾ.ಮಾರುತಿ. ಎಸ್. ಬಾಗಡೆ ಸಲಹೆ
Last Updated 25 ಫೆಬ್ರುವರಿ 2023, 12:53 IST
ಅಕ್ಷರ ಗಾತ್ರ

ರಾಯಚೂರು: ಹೊಸದಾಗಿ ವೃತ್ತಿಯನ್ನು ಮಾಡುವ ಯುವ ವಕೀಲರು ನಿರಂತರವಾಗಿ ಇಚ್ಚೆ ಮತ್ತು ಶ್ರದ್ಧೆಯಿಂದ ಆಸಕ್ತಿದಾಯಕವಾದ ಪರಿಪೂರ್ಣ ಅಧ್ಯಯನ ಮಾಡಿದಾಗ ಮಾತ್ರ ಈ ವಕೀಲ ವೃತ್ತಿಯಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮಾರುತಿ. ಎಸ್. ಬಾಗಡೆ ಹೇಳಿದರು.

ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಡಾ. ಎಂ. ನಾಗಪ್ಪ ವಕೀಲರು ಪ್ರತಿಷ್ಠಾನ, ಜಿಲ್ಲಾ ವಕೀಲರ ಸಂಘ ಹಾಗೂ ಅಖಿಲ ಭಾರತ ವಕೀಲರ ಒಕ್ಕೂಟ (ಎಐಎಲ್‌ಯು )ದಿಂದ ವಕೀಲರಿಗಾಗಿ ಶನಿವಾರ ಏರ್ಪಡಿಸಿದ್ದ ಒಂದು ದಿನದ ವಿಶೇಷ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ವಕೀಲರು ಯಾವತ್ತೂ ವಿದ್ಯಾರ್ಥಿಗಳಿದ್ದಂತೆ, ಕೊನೆಯವರೆಗೂ ಕಲಿಕೆಯ ಪ್ರಕ್ರಿಯೆಯಲ್ಲಿ ತೊಡಗಿರಬೇಕು. ವಕೀಲ ವೃತ್ತಿ ಸಮಾಜದಲ್ಲಿ ಅತ್ಯಂತ ಘನತೆ ಇರುವ ವೃತ್ತಿಯಾಗಿದೆ ಎಂದರು.

ಹಿರಿಯ ವಕೀಲ ಮಸ್ಕಿ ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಧಾರವಾಡ ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಶಿವಶಂಕರ ಎಸ್.ಯಡ್ರಾಮಿ ವಿಶೇಷ ಉಪನ್ಯಾಸ ನೀಡಿದರು. ರಾಯಚೂರಿನ‌ ಹಿರಿಯ ವಕೀಲ ಶಶಿಧರಗೌಡ ಕೆಲೂರು, ಇಂದೂದರ್ ಪೊಲೀಸ್‌ ಪಾಟೀಲ್ ವಿವಿಧ ವಿಷಯಗಳ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು.

ಪ್ರತಿಷ್ಠಾನದ ಅಧ್ಯಕ್ಷ ಬಸ್ಸಪ್ಪ ತಿಪ್ಪಾರೆಡ್ಡಿ, ನ್ಯಾಯಾಧೀಶರಾದ ದೇವಾನಂದ ಪುಟ್ಟಪ್ಪ ನಾಯಕ್, ಮಹಾದೇವಪ್ಪ ಗಂಗಪ್ಪ ಕುಡುವಕ್ಕಲಿಗೇರ, ಜಗದೀಶ್ವರ್. ಎಂ, ರಮೇಶ ಅಪ್ಪಸಾಬ್, ದಯಾನಂದ ಎಂ. ಬೆಲೂರೆ.ಲ, ಅನೀಲ್ ಶೇಖನವರ್, ಸುರೇಶ್ ವಗ್ಗಣ್ಣನವರ್ ಇದ್ದರು.

ವಕೀಲ ಅಂಬಾಪತಿ ಪಾಟೀಲ್ ಸ್ವಾಗತಿಸಿದರು. ಜಿ.ಎಸ್. ವಿರಭದ್ರಪ್ಪ ನಿರೂಪಿಸಿದರು. ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಉದಯಕುಮಾರ ಮಲ್ದಿ, ಜಿಲ್ಲಾ ಉಪಾಧ್ಯಕ್ಷ ಬಿ.ಎನ್. ನಾಯಕ, ವಕೀಲ ಮಲ್ಲಿಕಾರ್ಜುನ, ಪಿ. ಬಸವರಾಜ, ಶಿವರಾಜ ಪಾಟೀಲ್, ಶಿವಕುಮಾರ ಮ್ಯಾಗಳಮನಿ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳ ವಕೀಲರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT