ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಲಿಂಡರ್ ದರ ಏರಿಕೆ: ಎಸ್‌ಯುಸಿಐ ಪ್ರತಿಭಟನೆ

Last Updated 29 ಫೆಬ್ರುವರಿ 2020, 15:40 IST
ಅಕ್ಷರ ಗಾತ್ರ

ರಾಯಚೂರು: ಅಡುಗೆ ಅನಿಲ ದರ, ಬಸ್, ರೈಲ್ವೆ ಪ್ರಯಾಣ ದರ ಏರಿಕೆಯನ್ನು ವಿರೋಧಿಸಿ ಸೊಷಿಯಲಿಸ್ಟ್‌ ಯುನಿಟಿ ಸೆಂಟರ್‌ ಆಫ್‌ ಇಂಡಿಯಾ (ಎಸ್‌ಯುಸಿಐ) ಕಮ್ಯುನಿಸ್ಟ್ ಪಕ್ಷದಿಂದ ಸಿಲಿಂಡರ್ ಪ್ರದರ್ಶಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಸರ್ಕಾರ ಈಗಾಗಲೇ ಡೀಸೆಲ್– ಪೆಟ್ರೊಲ್‌ ದರ ಹಾಗೂ ಪ್ರಯಾಣದ ದರ ಏರಿಕೆ ಮಾಡಿರುವ ಬೆನ್ನಲ್ಲೇ ಅಡುಗೆ ಅನಿಲ ದರವನ್ನು ₹150ಕ್ಕೆ ಏರಿಕೆ ಮಾಡಿದ ಕಾರಣ ತೀವ್ರ ಸಮಸ್ಯೆಯಾಗಿದೆ. ಇತ್ತ ರಾಜ್ಯ ಸರ್ಕಾರ ಬಸ್ ಸಾರಿಗೆ ದರ ಶೇ 12, ಹಾಲಿನ ದರ ₹2 ಇತರೆ ದಿನಬಳಕೆಯ ವಸ್ತುಗಳ ದರ ಏರಿಕೆ ಮಾಡಿರುವುದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಎಂದು ದೂರಿದರು.

ಎರಡು ವರ್ಷಗಳಿಂದ ಪ್ರವಾಹಕ್ಕೆ ಗುರಿಯಾದ ಸಂತ್ರಸ್ತರು ಇನ್ನೂ ಚೇತರಿಸಿಲ್ಲ. ದೇಶದಲ್ಲಿ ಹರಡುತ್ತಿರುವ ಆರ್ಥಿಕ ಬಿಕ್ಕಟ್ಟು ಮತ್ತು ಉದ್ಯೋಗ ನಾಶವು ಜನರ ಆದಾಯ ಕುಂಠಿತಗೊಳಿಸಿವೆ. ಇಂತಹ ಸಂದರ್ಭದಲ್ಲಿ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಬಡವರು, ದುಡಿಯುವ ವರ್ಗದವರು ಅಡುಗೆ ಅನಿಲ ಬಳಸುತ್ತಿದ್ದು ಪ್ರಧಾನಿ ಮೋದಿ ಅವರು ಒಂದು ಕಡೆ ಸಬ್ಸಿಡಿ ನೀಡಿ, ಅಡುಗೆ ಅನಿಲ ದರ ಏರಿಸಿ ಮತ್ತೊಂದು ಕೈಯಿಂದ ಕಿತ್ತುಕೊಳ್ಳುವ ಮೂಲಕ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿ ಸದಸ್ಯ ಎನ್,ಎಸ್.ವೀರೇಶ, ಚನ್ನಬಸವ ಜಾನೇಕಲ್, ಮಹೇಶ ಸಿ. , ರಾಮಣ್ಣ, ಪ್ರಮೋದ್ ಕುಮಾರ, ಮಲ್ಲನಗೌಡ, ರೇಖಾ, ಕೃಷ್ಣ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT