ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ಕುಡಿಯುವ ನೀರು ಪೂರೈಸಲು ಒತ್ತಾಯ

Last Updated 2 ಜೂನ್ 2022, 15:49 IST
ಅಕ್ಷರ ಗಾತ್ರ

ರಾಯಚೂರು: ನಗರದಲ್ಲಿನ ವಾಂತಿಭೇದಿ ಪ್ರಕರಣಗಳನ್ನು ನಿಯಂತ್ರಿಸಬೇಕು ಹಾಗೂ ಶುದ್ಧ ಕುಡಿಯುವ ನೀರು ಸರಬರಾಜಿಗೆ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ( ಕಮ್ಯೂನಿಸ್ಟ್ ) ಜಿಲ್ಲಾ ಘಟಕದ ಪದಾಧಿಕಾರಿಗಳು ಗುರುವಾರ ನಗರಸಭೆ ಪೌರಾಯುಕ್ತ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

ನಗರದಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ವೈಫಲ್ಯದಿಂದಾಗಿ ಕಳೆದ ಮೂರ್ನಾಲ್ಕು ದಿನಗಳಲ್ಲಿ ಒಂದು ಸಾವಿರಾರು ಜನರು ತೀವ್ರ ಅಸ್ವಸ್ಥರಾಗಿದ್ದು, ಓರ್ವ ಮಹಿಳೆ ಮೃತಪಟ್ಟಿದ್ದಾರೆ. ನಗರದ ವಿವಿಧ ಆಸ್ಪತ್ರೆಗಳಲ್ಲಿ ನೂರಾರು ಜನರು ದಾಖಲಾಗಿದ್ದು ತೀವ್ರ ಆಘಾತ ಹಾಗೂ ಆತಂಕದ ಸಂಗತಿಯಾಗಿದೆ.

ನಗರದಲ್ಲಿ ಸರಬರಾಜಾಗುತ್ತಿರುವ ನೀರು ರಾಸಾಯನಿಕ ಮಿಶ್ರಿತ, ವೀಪರೀತ ವಾಂತಿಬೇದಿಗೆ ಕಾರಣವಾಗುವ ರೋಗಾಣು ಜೀವಿಗಳಿಂದ ಕೂಡಿದೆ.
ನಗರಕ್ಕೆ ಶುದ್ಧ ನೀರನ್ನು ಸರಬರಾಜು ಮಾಡಲು ಹಾಗೂ ವಾಂತಿಭೇದಿ ನಿಯಂತ್ರಿಸುವಲ್ಲಿ ನಗರಸಭೆ ಆಡಳಿತ ಮಂಡಳಿ ಸಂಪೂರ್ಣ ವಿಫಲವಾಗಿದೆ‌ ಎಂದು ದೂರಿದರು.
ನೀರು ಕುಡಿಯಲು, ಬಳಸಲು ರಾಂಪೂರ ಹಾಗೂ ಚಿಕ್ಕಸುಗೂರು ಶುದ್ದೀಕರಣ ಘಟಕಗಳಲ್ಲಿ ನೀರಿನ ಶುದ್ಧೀಕರಣವೇ ಸ್ಥಗಿತವಾಗಿದೆ. ನೀರಿನ ಶುದ್ಧತೆ ಪರೀಕ್ಷಿಸಲು ತಜ್ಞರಿ ನೇಮಕ ಮಾಡಬೇಕು.

ನಗರದ ಎಲ್ಲಾ ಆಸ್ಪತ್ರೆಗಳಲ್ಲಿ ವಾಂತಿಭೇದಿಗಳಿಂದ ದಾಖಲಾಗುವ ಎಲ್ಲಾ ಪ್ರಕರಣಗಳ ಖರ್ಚುವೆಚ್ಚವನ್ನು ನಗರಸಭೆ ಹಾಗೂ ಜಿಲ್ಲಾಡಳಿತವೇ ಭರಿಸಬೇಕು. ವಾಂತಿಭೇದಿಯಿಂದ ಮೃತಪಟ್ಟ ಹಾಗೂ ಬಾದಿತ ಕುಟುಂಬಗಳಿಗೆ ಸೂಕ್ತ ಪರಿಹಾರ ಘೋಷಿಸಬೇಕು.ಶುದ್ದೀಕರಣ ಘಟಕಗಳ ಸಂಪೂರ್ಣ - ಸಮಗ್ರ ದುರಸ್ತಿ ಕೈಗೊಳ್ಳಬೇಕು. ಅಪಾಯಕಾರಿ ರಾಸಾಯನಿಕ ಮುಕ್ತ ಹಾಗೂ ರೋಗಾಣು ಮುಕ್ತ ನೀರನ್ನು ಸರಬರಾಜು ಮಾಡಬೇಕು. ನೀರಿನ ಶುದ್ಧತೆ, ಕುಡಿಯಲು ಬಳಸಲು ಯೋಗ್ಯವಾಗಿರುವ ಬಗ್ಗೆ ಸೂಕ್ತ ಪರೀಕ್ಷೆ ಮಾಡಬೇಕು. ಅಗತ್ಯವಾದ ಪ್ರಯೋಗಶಾಲೆ, ತಜ್ಞರ ನೇಮಕ ಮಾಡಬೇಕು. ವಾರ್ಡಗೆ ಒಂದರಂತೆ ಆರ್‌ಓ ಶುದ್ದೀಕರಣ ಘಟಕ ನಿರ್ಮಿಸಿ ಲವಣಾಂಶವುಳ್ಳ ಶುದ್ಧ ನೀರನ್ನು ಎಲ್ಲಾ ಜನರಿಗೆ ವಿತರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಡಾ.ಚಂದ್ರಗಿರೀಶ, ಅಣ್ಣಪ್ಪ, ಮಹೇಶ ಚೀಕಲಪರ್ವಿ, ಚನ್ನಬಸವ ಜಾನೇಕಲ್, ಕಾರ್ತಿಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT