ಚಿಣ್ಣರ , ಬಣ್ಣದ ಲೋಕ, ರಂಗಶಿಬಿರ ಉದ್ಘಾಟನೆ

ಶುಕ್ರವಾರ, ಮೇ 24, 2019
22 °C

ಚಿಣ್ಣರ , ಬಣ್ಣದ ಲೋಕ, ರಂಗಶಿಬಿರ ಉದ್ಘಾಟನೆ

Published:
Updated:
Prajavani

ರಾಯಚೂರು: ತಾಲ್ಲೂಕಿನ ಮಂಡಲಗೇರಾ ಗ್ರಾಮದಲ್ಲಿ ಶಾಲಾ ಮಕ್ಕಳಿಗಾಗಿ ಆಯೋಜಿಸಿರುವ 10 ದಿನಗಳ ಬೇಸಿಗೆ ಶಿಬಿರವನ್ನು ಬುಧವಾರ ಉದ್ಘಾಟಿಸಲಾಯಿತು.

ಶಿಬಿರದಲ್ಲಿ ಅಭಿನಯ, ಮೇಕಪ್, ಮಾಸ್ಕ್ ಮೇಕಿಂಗ್, ಪೇಂಟಿಂಗ್, ಪೇಪರ್ ಕ್ರಾಪ್ಟ್, ರಂಗಾಟಗಳು, ಕೋಲಾಟ, ರಂಗಗೀತೆಗಳ ಕುರಿತು ತರಬೇತಿ ನೀಡಲಾಗುತ್ತದೆ.

ಗ್ರಾಮ ಪಂಚಾಯಿತಿ ಸದಸ್ಯ ಆಂಜೀನಯ್ಯ ಮಾತನಾಡಿ, ‘ನಮ್ಮೂರಿನ ಪ್ರತಿಭೆಗಳು ರಂಗ ತರಬೇತಿ ಪಡೆದು ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ರಾಜ್ಯದಾದ್ಯಂತ ಸಂಚಾರ ಮಾಡಿದ್ದಾರೆ. ತಾನು ಕಲಿತದ್ದನ್ನು ತನ್ನ ಊರಿನಲ್ಲಿ ಮಕ್ಕಳಿಗೆ ಕಲಿಸಬೇಕು. ಊರಿಗೆ ತನ್ನಿಂದ ಒಂದು ಕೊಡುಗೆ ಇರಲಿ ಅಂತ ನಮ್ಮ ಊರಿನ ಮಕ್ಕಳಿಗೆ ರಂಗಬೇತಿ ನೀಡಲು ಬಂದಿದ್ದಾರೆ. ಅವರಿಗೆ ನಾವೆಲ್ಲ ಪ್ರೋತ್ಸಾಹಿಸೋಣ’ ಎಂದರು.  

ಗ್ರಾಮ ಪಂಚಾಯಿತಿ ಸದಸ್ಯ ಕೆ.ತಿಮ್ಮಪ್ಪ, ಎಸ್‌ಡಿಎಂಸಿ ಉಪಾಧ್ಯಕ್ಷ ರಾಘವರೆಡ್ಡಿ, ಮುಖಂಡರಾದ ದೊಡ್ಡ ಯಂಕಣ್ಣ, ರಮೇಶ್ ಬಡೀಗೇರ್, ರಮೇಶ್ ಯಾದವ, ವಿನೋದ ಮಂಡಲಗೇರಾ, ಶಿಕ್ಷಕ ಉದಯಕುಮಾರ್, ನರೇಶ್ ಯಾದವ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !