ಹಂಪಿಯಲ್ಲಿ ಸುರೇಂದ್ರ ತೀರ್ಥರ ಬೃಂದಾವನ ಪತ್ತೆ

7

ಹಂಪಿಯಲ್ಲಿ ಸುರೇಂದ್ರ ತೀರ್ಥರ ಬೃಂದಾವನ ಪತ್ತೆ

Published:
Updated:
Deccan Herald

ರಾಯಚೂರು: ’ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಸಮೀಪದಲ್ಲಿ ಸುರೇಂದ್ರ ತೀರ್ಥರ ಮಠವಿದೆ. ಆದರೆ, ಸುರೇಂದ್ರ ತೀರ್ಥರ ಬೃಂದಾವನ ಎಲ್ಲಿದೆ ಎಂಬುದು ಇದುವರೆಗೂ ಪತ್ತೆಯಾಗಿರಲಿಲ್ಲ. ದೇವಸ್ಥಾನದ ಬಳಿ ಉತ್ಖನನ ಮಾಡುವಾಗ ಬೃಂದಾವನವೊಂದು ಕಂಡು ಬಂದಿದೆ ಎನ್ನುವ ವಿಚಾರ ಮಾಧ್ಯಮಗಳಿಂದ ಈಗಷ್ಟೇ ಗೊತ್ತಾಗಿದೆ. ಭಾನುವಾರ ಬೆಳಿಗ್ಗೆ ಹಂಪಿಗೆ ಹೋಗಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಶೀಲಿಸಲಾಗುವುದು’ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದ್ದಾರೆ.

ಶನಿವಾರ ಈ ಬಗ್ಗೆ ಹೇಳಿಕೆ ನೀಡಿರುವ ಅವರು, ’ಬೃಂದಾವನ ಪತ್ತೆ ಆಗಿರುವುದು ಸಂತೋಷದ ವಿಷಯ. ಅಧಿಕಾರಿಗಳೊಂದಿಗೆ ಚರ್ಚಿಸಿ ಐತಿಹಾಸಿಕ ದಾಖಲೆಗಳಲನ್ನು ನೋಡಿ, ಬೃಂದಾವನದ ಮಾದರಿ, ಅದರ ಮೇಲಿರುವ ಕುರುಹುಗಳನ್ನು ಪರಿವೀಕ್ಷಣೆ ಮಾಡಲಾಗುವುದು. ಮಠದಲ್ಲಿರುವ ದಾಖಲೆಗಳು ಮತ್ತು ಇತಿಹಾಸ ತಜ್ಞರ ಅಭಿಪ್ರಾಯವನ್ನು ಕ್ರೋಢೀಕರಿಸಿ ನಿರ್ಣಯಕ್ಕೆ ಬರಲಾಗುವುದು’ ಎಂದು ಹೇಳಿದ್ದಾರೆ.

ನವರಾತ್ರಿ ಉತ್ಸವ ನಿಮಿತ್ತ ಮಂತ್ರಾಲಯದಲ್ಲಿ ಪೂಜಾ ಕಾರ್ಯಗಳನ್ನು ಮುಗಿಸಿಕೊಂಡು ಹಂಪಿಗೆ ತೆರಳಲಾಗುವುದು. ಹಂಪಿ ಅಭಿವೃದ್ಧಿ ಪ್ರಾಧಿಕಾರದವರು, ಮಠದ ಶಿಷ್ಯರು ಈ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ಕೋರಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !