ಬುಧವಾರ, ಅಕ್ಟೋಬರ್ 16, 2019
21 °C

14ರಿಂದ ಸಫಾಯಿ ಕರ್ಮಚಾರಿಗಳ ಸಮೀಕ್ಷೆ

Published:
Updated:

ರಾಯಚೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಅಕ್ಟೋಬರ್ 14 ರಿಂದ ಸಫಾಯಿ ಕರ್ಮಚಾರಿಗಳ ಸಮೀಕ್ಷೆ ಆರಂಭವಾಗಲಿದೆ. ವಿವಿಧ ಸ್ಥಳಗಳಲ್ಲಿ ಆಯೋಜಿಸಿರುವ ಸಮೀಕ್ಷೆಯಲ್ಲಿ ಭಾಗವಹಿಸಿ ಸಂಬಂಧಪಟ್ಟವರಿಗೆ ಅಗತ್ಯ ದಾಖಲೆಗಳನ್ನು ಒದಗಿಸಲು ಸೂಚಿಸಲಾಗಿದೆ.

ಮ್ಯಾನುವೆಲ್ ಸ್ಕ್ಯಾವೆಂಜರ್, ಒಣ ಮಲದ ಗುಂಡಿಗಳ ಸ್ವಚ್ಛತೆ, ತೆರೆದ ಮತ್ತು ಸ್ವಚ್ಛತೆ ಇಲ್ಲದ ಮಲದ ಗುಂಡಿಗಳ ತ್ಯಾಜ್ಯವನ್ನು ಸ್ವಚ್ಛಗೊಳಿಸುವ, ಶೌಚಾಲಯಕ್ಕೆ ಹೊಂದಿಕೊಂಡಿರುವ ಒಂಟಿ ಗುಂಡಿಗಳನ್ನು ಸ್ವಚ್ಛಗೊಳಿಸುವ ಮತ್ತು ಶೌಚಾಲಯದಿಂದ ಮಲ ಸೇರುವ ಚರಂಡಿಗಳನ್ನು ಸ್ವಚ್ಛಗೊಳಿಸುವ ವೃತ್ತಿಯಲ್ಲಿ ತೊಡಗಿದವರಿಗೆ ಈ ಸಮೀಕ್ಷೆ ಅನ್ವಯವಾಗಲಿದೆ.

14ರಂದು ಐಬಿ ರಸ್ತೆಯಲ್ಲಿನ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ, 15ರಂದು ಮಾನ್ವಿ, 16ರಂದು ಸಿಂಧನೂರಿನ ಹಾಗೂ 18ರಂದು ದೇವದುರ್ಗದ ಮತ್ತು 19ರಂದು ಲಿಂಗಸುಗೂರಿನ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 2ಗಂಟೆವರೆಗೆ ಸಮೀಕ್ಷೆ ಕಾರ್ಯ ನಡೆಯಲಿದೆ.

Post Comments (+)