ಹಟ್ಟಿ ಚಿನ್ನದ ಗಣಿ: ಸಮೀಪದ ಗೌಡೂರು ಗ್ರಾಮದ ರೈತ ಬಸವರಾಜ ಉದ್ಬಾಳ ‘ಥೈವಾನ್ ರೆಡ್ ಲೇಡಿ’ ತಳಿಯ ಪಪ್ಪಾಯ ಬೆಳೆದು ಲಾಭ ಕಂಡುಕೊಳ್ಳುತ್ತಿದ್ದಾರೆ.

4 ಎಕರೆಯಲ್ಲಿ 2,500, ಪಪ್ಪಾಯ ಸಸಿಗಳನ್ನು ಹಾಗೂ 2 ಸಾವಿರ ದಾಳಿಂಬೆ ಸಸಿಗಳನ್ನು ವಿಜಯಪುರ ಜಿಲ್ಲೆಯಿಂದ ತಂದು ನೆಟ್ಟಿದ್ದಾರೆ. ನಾಟಿಗೆ ಮುಂಚೆ ಭೂಮಿಗೆ ಸಾಕಷ್ಟು ಕೊಟ್ಟಿಗೆ ಗೊಬ್ಬರ ನೀಡಿ ಮಣ್ಣು ಹದಗೊಳಿಸಿ ನಾಟಿಗೆ ಸಿದ್ದಪಡಿಸಿಕೊಂಡು 5 ಅಡಿ ಅಂತರದಲ್ಲಿ ಸಸಿ ನಾಟಿ ಮಾಡಿದ್ದಾರೆ.

‘ಸಸಿ ಖರೀದಿ, ಹನಿ ನೀರಾವರಿಗೆಂದು ₹ 4 ಲಕ್ಷ ವೆಚ್ಚ ಮಾಡಿದ್ದೇನೆ, ನಾಟಿ ಮಾಡಿ 8 ತಿಂಗಳಿಗೆ ಗಿಡಗಳು ಕಾಯಿ ಬಿಡಲು ಪ್ರಾರಂಭಿಸಿದವು. ಈಗಾಗಲೇ 50 ಟನ್ ಮಾರಾಟ ಮಾಡಿ ₹ 6 ಲಕ್ಷ ಲಾಭ ಗಳಿಕೆ ಮಾಡಿದೆ. ನಿರೀಕ್ಷಿಸಿದ್ದಕ್ಕಿಂತ ಅಧಿಕ ಆದಾಯ ಕೈಗೆಟುಕುವಂತೆ ಪಪ್ಪಾಯ ಬೆಳೆ ನೀಡಿದೆ’ ಎಂದು ಬಸವರಾಜ ಮಾಹಿತಿ ನೀಡಿದರು.

15 ಜಾನುವಾರಗಳನ್ನು ಸಾಕಿದ್ದು ಹೈನುಗಾರಿಕೆ ಮೈಗೂಡಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಜಮೀನಿಗೆ ಬೇಕಾದ ಗೊಬ್ಬರ ಅವುಗಳಿಂದಲೇ ಪ್ರತಿವರ್ಷ 2 ಟನ್ ಸಿಗಲಿದೆ ಎಂದರು. ಜಮೀನಿನ ಸುತ್ತಲು, 20 ಅಧಿಕ ತೆಂಗಿನ ಮರಗಳನ್ನು ಬೆಳಸಿದ್ದಾರೆ. ಅಲ್ಲದೆ, ಸಜ್ಜೆ, ತೊಗರಿ, ಅಲಸಂದಿ, ಮೆಕ್ಕೆಜೋಳ ಬೆಳೆಗಳನ್ನು ಬೆಳೆದು ಇತರೆ ರೈತರಿಗೆ ಮಾದರಿಯಾಗಿದ್ದಾರೆ ಬಸವರಾಜ.

3 ವರ್ಷ ಬಾಳಿಕೆ: ಸಸಿ ನೆಟ್ಟು ಗಿಡವಾದ ನಂತರ ಮೂರು ವರ್ಷಗಳವರೆಗೆ ಬಾಳಿಕೆ ಬರುತ್ತವೆ. ಕಾಯಿ ಕಟ್ಟಲು ಒಂದು ವರ್ಷದ ಅವಧಿ ಬೇಕು. ಆನಂತರ ಎರಡುವರೆಗೆ ಕೊಯ್ಲು ಮಾಡಬಹುದು ಎಂದು ಅವರು ತಿಳಿಸಿದರು.

ಔಷಧ ಗುಣ ಹೊಂದಿರುವ ಪಪ್ಪಾಯ ಆರೋಗ್ಯಕ್ಕೆ ಉತ್ತಮ ಹಣ್ಣು ಬೇಸಿಗೆ ಮಳೆಗಾಲ, ಚಳಿಗಾಲದಲ್ಲೂ ಬೇಡಿಕೆ ಇರುವ ಹಣ್ಣು ಆಗಿದ್ದರಿಂದ ಮಾರುಕಟ್ಟೆಗೆ ತೊಂದರೆ ಇಲ್ಲ. ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ಕ್ರಿಮಿನಾಶಕ ರಾಸಾಯನಿಕ ಗೊಬ್ಬರ ಬಳಕೆಯ ಬದಲು ಸಾವಯುವ ಗೊಬ್ಬರ ಉಪಯೋಗ ಮಾಡಿದ್ದರಿಂದ ಖರ್ಚಿನ ಪ್ರಮಾಣವೂ ಕಡಿಮೆಯಾಯಿತು. ಗುಣಮಟ್ಟದ ಇಳುವರಿ ಬರಲು ಕಾರಣವಾಯಿತು ಎಂದು ಹೇಳುತ್ತಾರೆ.

ಕೊಯ್ಲು ಮಾಡಿದ ಫಲವನ್ನು ಮುಂಬೈ, ದೆಹಲಿ, ಹೈದರಾಬಾದ್, ಬೆಂಗಳೂರು, ಪುಣೆ, ಗೋವಾ, ಮಾರುಕಟ್ಟೆಗೆ ತೆಗೆದುಕೊಂಡು ಹೋಗಲಾಗುವುದು. ಅಲ್ಲಿ ಬೆಲೆ ಹೆಚ್ಚು ಸಿಗುವುದರಿಂದ ಕೈತುಂಬ ಹಣ ಸಿಗಲಿದೆ ಎಂದರು.

ನಮ್ಮ ಭಾಗದಲ್ಲಿ ವಾಣಿಜ್ಯ ಬೆಳೆಗಳ ಬಗ್ಗೆ ರೈತರಿಗೆ ಮಾಹಿತಿ ಕೊರತೆ ಇದೆ. ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದರೆ ರೈತರಿಗೆ ಅನುಕೂಲವಾಗಲಿದೆ
ಬಸವರಾಜ ಗೌಡೂರು, ಪಪ್ಪಾಯ ಬೆಳೆದ ರೈತ

ರೈತ ಸಂಪರ್ಕ ಕೇಂದ್ರದಿಂದ ರೈತರಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಲು ನಮ್ಮ ಇಲಾಖೆ ಸಿದ್ಧವಿದೆ. ಸೌಲಭ್ಯಗಳನ್ನು ಪಡೆದು ರೈತರು ಅಭಿವೃದ್ಧಿ ಹೊಂದಲಿ
-ಹನುಮಂತ ರಾಡೋಡ್, ಕೃಷಿ ಅಧಿಕಾರಿ ಗುರುಗುಂಟಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.