ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಶಿಫಾರಸಿನ ಮೇರೆಗೆ ಮಸ್ಕಿಯ ಭ್ರಮರಾಂಬ ದೇವಸ್ಥಾನದಲ್ಲಿ 2023ರ ಅಕ್ಟೋಬರ್‌ನಲ್ಲಿ ನಡೆದ ನವರಾತ್ರಿ ಉತ್ಸವದ ಮೆರವಣಿಗೆಗೆ ಇಲಾಖೆಯು ಐದು ಜನಪದ ಕಲಾ ತಂಡಗಳನ್ನು ಕಳುಹಿಸಿಕೊಟ್ಟಿತ್ತು. 2024ರ ಮಾರ್ಚ್‌ನಲ್ಲಿ ಇಲಾಖೆಯ ನಿರ್ದೇಶಕರು ₹3.30 ಲಕ್ಷ ಅನುದಾನ ಬಿಡುಗಡೆ ಮಾಡಿ, 2023ರ ಅಕ್ಟೋಬರ್ 28ರಂದು ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಐದು ತಂಡಗಳಿಗೆ ಗೌರವಧನ ಪಾವತಿಸುವಂತೆ ಆದೇಶಿಸಿದ್ದರು. ಆದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಂದಿನ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ ಅವರು ಈ ಆದೇಶವನ್ನು ಉಲ್ಲಂಘಿಸಿ, 2024ರಲ್ಲಿ ಪಾಲ್ಗೊಂಡಿದ್ದ ಕಲಾ ತಂಡಗಳಿಗೆ ಈ ಹಣವನ್ನು ಪಾವತಿಸಿದ್ದಾರೆ.