ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸುಗೂರು: ಗೃಹ ಭಾಗ್ಯ ಯೋಜನೆಯ ಹಣ ಬಿಡುಗಡೆಗೆ ಗ್ರಹಣ

ಅನುದಾನಕ್ಕಾಗಿ ಫಲಾನುಭವಿಗಳ ಮನವಿ: ಅಧಿಕಾರಿಗಳಿಂದ ಕಾಮಗಾರಿ ಸ್ಥಳ ಪರಿಶೀಲನೆ
ಅಕ್ಷರ ಗಾತ್ರ

ಲಿಂಗಸುಗೂರು: ಸ್ಥಳೀಯ ಪುರಸಭೆಯ 10 ಪೌರಕಾರ್ಮಿಕರಿಗೆ ಪೌರಕಾರ್ಮಿಕ ಗೃಹ ಭಾಗ್ಯ ಯೋಜನೆಯಡಿ 2018-19ನೇ ಸಾಲಿನಲ್ಲಿ ಮನೆಗಳ ಮಂಜೂರು ಮಾಡಲಾಗಿದೆ. ಆದರೆ, ಸಂಬಂಧಿಸಿದ ಕಂತಿನ ಹಣ ಪಾವತಿಸಲು ತಾಂತ್ರಿಕ ಕಾರಣಗಳನ್ನು ಮುಂದಿಟ್ಟಿರುವುದು ಫಲಾನುಭವಿ ಕಾರ್ಮಿಕರಿಗೆ ಬೇಸರವನ್ನು ಉಂಟುಮಾಡಿದೆ.

2018-19ರಲ್ಲಿ ಪೌರ ಕಾರ್ಮಿಕರಾದ ಸರಸ್ವತಿ ಲಕ್ಷ್ಮಣ, ಕುಪ್ಪಣ್ಣ, ಗದ್ದೆಪ್ಪ ಶಿವಪ್ಪ, ದುರುಗಪ್ಪ ಹನುಮವ್ವ, ಮಹಾಲಕ್ಷ್ಮಿ ಹುಲಗವ್ವ, ಭೀಮಣ್ಣ ಯಲ್ಲಪ್ಪ, ದುರುಗಪ್ಪ ಮಹಾದೇವಪ್ಪ, ಕುಪ್ಪಣ್ಣ ಬಸಪ್ಪ, ದ್ಯಾಮವ್ವ ಯಲ್ಲಪ್ಪ, ಲಕ್ಷ್ಮಮ್ಮ ಹುಲಗಪ್ಪ ಅವರು ಆಯ್ಕೆಗೊಂಡಿದ್ದರು. ಮನೆಗಳ ಬುನಾದಿ ಹಾಕಿಕೊಂಡಾಗ ₹ 2ಲಕ್ಷ ಬಿಡುಗಡೆ ಮಾಡಿದ್ದು ಬಿಟ್ಟರೆ ಈವರೆಗೂ ಬಿಡಿಕಾಸು ನೀಡಿಲ್ಲ.

ಮನೆಗಳು ಲೆಂಟಲ್‍ ಅಥವಾ ಛತ್ತು ಹಾಕಿದ ಸಂದರ್ಭದಲ್ಲಿ 2ನೇ ಕಂತಿನ ಹಣ ಬಿಡುಗಡೆ ಮಾಡಬೇಕು. ಒಂದೂವರೆ ವರ್ಷದಿಂದ 2ನೇ ಕಂತು ವಿಳಂಬದಿಂದ ಕಾರ್ಮಿಕರು ಅತಂತ್ರ ಸ್ಥತಿಯಲ್ಲಿದ್ದಾರೆ. ಪುರಸಭೆ ಬಜೆಟ್‍ ಮಂಡನೆ ವಿಳಂಬ, ಪಿಎಫ್‍ ಇಲಾಖೆಗೆ ಹಣ ಪಾವತಿಸದೆ ಹೋಗಿದ್ದರಿಂದ 16 ಖಾತೆಗಳನ್ನು ಜಪ್ತಿ ಮಾಡಿರುವ ಸಂಗತಿಗಳು ಕಾರ್ಮಿಕರನ್ನು ಸಂಕಷ್ಟಕ್ಕೆ ಸಿಲುಕಿಸುವೆ.

ಒಂದು ವರ್ಷದಿಂದ ಫಲಾನುಭವಿ ಕಾರ್ಮಿಕರು ಆಡಳಿತ ಮಂಡಳಿ ಪ್ರತಿನಿಧಿಗಳು, ಮುಖ್ಯಾಧಿಕಾರಿಗಳ ಮುಂದೆ ಅಳಲು ತೋಡಿಕೊಂಡರೂ ಪ್ರಯೋಜನವಾಗಿಲ್ಲ. ಬಜೆಟ್‍ ಮಂಡನೆ, ಸರ್ಕಾರ ಖಾತೆ ಬಳಕೆಗೆ ಅನುಮತಿ ನೀಡಿದ್ದರು ಕೂಡ ಅಧಿಕಾರಿಗಳ ಹಗ್ಗ ಜಗ್ಗಾಟಕ್ಕೆ ನಲುಗಿ ಹೋಗಿದ್ದೇವೆ ಎಂದು ಕಾರ್ಮಿಕರು ಪುರಸಭೆ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು.

ಪ್ರಭಾರ ಅಧಿಕಾರ ವಹಿಸಿಕೊಂಡ ಮುಖ್ಯಾಧಿಕಾರಿ ಪ್ರವೀಣ ಭೋಗಾರ ಪೌರ ಕಾರ್ಮಿಕರ ಸಮಸ್ಯೆಗಳನ್ನು ಆಲಿಸುವ ಜೊತೆಗೆ ಸಮೂಹ ಸಂಘಟನಾ ಅಧಿಕಾರಿ ರಾಜಶೇಖರ ಪಾಟೀಲ, ಕಿರಿಯ ಎಂಜಿನಿಯರ್‍ ಹಸನ್‍ಸಾಬ ಅವರೊಂದಿಗೆ ಫಲಾನುಭವಿ ಕಾರ್ಮಿಕರು ನಿರ್ಮಿಸಿಕೊಳ್ಳುತ್ತಿರುವ ಮನೆಗಳಿಗೆ ಭೇಟಿ ನೀಡಿದ್ದು ಕಾರ್ಮಿಕರಲ್ಲಿ ಆಶಾದಾಯಕ ಭಾವನೆ ಹುಟ್ಟಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT