ಕಕ್ಕೇರಾ: ‘ಪಟ್ಟಣ ಸಮೀಪದ ತಿಂಥಣಿ ಮೌನೇಶ್ವರ ದೇಗುಲದ ಅಭಿವೃದ್ಧಿಗೆ ತಹಶೀಲ್ದಾರ್ ಹಾಗೂ ಸಹಾಯಕ ಆಯುಕ್ತರು ಆಸಕ್ತಿ ತೋರುತ್ತಿಲ್ಲ. ಸಾಕಷ್ಟು ಹೋರಾಟ ಮಾಡಿದರೂ ಹೇಳಿಕೊಳ್ಳುವಂತಹ ಅಭಿವೃದ್ಧಿ ಆಗುತ್ತಿಲ್ಲ. ಹಾಗಾಗಿ ಸಂಪೂರ್ಣ ಅಭಿವೃದ್ಧಿಗೆ ಸಹಕರಿಸಬೇಕು’ ಎಂದು ತಿಂಥಣಿ ಗ್ರಾಮದ ಮುಖಂಡ ಗಂಗಾಧರ ನಾಯಕ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

‘ಪ್ರತಿ ವರ್ಷ ದೇಗುಲಕ್ಕೆ ₹ 1 ಕೋಟಿಗೂ ಹೆಚ್ಚು ಆದಾಯ ಬರುತ್ತಿದ್ದು, ಆ ಹಣ ವಿನಿಯೋಗಿಸಲು ತಹಶೀಲ್ದಾರ್, ಸಹಾಯಕ ಆಯುಕ್ತರಿಗೆ ಮಾತ್ರ ಅವಕಾಶವಿದೆ. ಭಕ್ತರಿಗೆ ವಸತಿ ಕೋಣೆಗಳ ಅವಶ್ಯವಿದ್ದು, ಈ ಬಗ್ಗೆ ಕ್ರಮ ವಹಿಸುತ್ತಿಲ್ಲ. ಹಾಗೆಯೇ ಮೌನೇಶ್ವರ ದೇಗುಲದ 12 ಎಕರೆ ಜಮೀನು ಒತ್ತುವರಿಯಾಗಿದೆ. ಅತಿಕ್ರಮಿಸಲಾದ ಜಾಗದಲ್ಲೇ ಮೌನೇಶ್ವರರು ವಚನ ರಚಿಸಿದ ಸ್ಥಳ, ಕೋಣನ ಗವಿಯೂ ಇದೆ. ಈ ಜಾಗಕ್ಕೆ ಕಾಂಪೌಂಡ್ ವ್ಯವಸ್ಥೆ ಮಾಡಿ ಒತ್ತುವರಿಯಾದ ಜಮೀನನ್ನು ಮರಳಿ ಪಡೆಯಬೇಕು’ ಎಂದು ಆಗ್ರಹಿಸಿದ್ದಾರೆ.

‘ದೇಗುಲದ ಹಿಂಬದಿಯಲ್ಲಿರುವ ನೀರಿನ ಟ್ಯಾಂಕ್ನಿಂದ ಹೇಳದೆ – ಕೇಳದೆ ಸಾರ್ವಜನಿಕರು ಪೈಪ್ಲೈನ್ ಮುಖಾಂತರ ನೀರು ತೆಗೆದುಕೊಂಡು ಹೋಗುವುದರಿಂದ ಜಾತ್ರೆಯಲ್ಲಿ ನೀರಿನ ಸಮಸ್ಯೆ ಉಂಟಾಗುತ್ತಿದೆ. ಮೇಲಿಂದ ಟ್ಯಾಂಕ್ ಸ್ವಚ್ಛವಾಗಿಲ್ಲ. ಅದೇ ನೀರು ದೇಗುಲಕ್ಕೂ ಸರಬರಾಜು ಆಗುತ್ತದೆ. ಭಕ್ತರು ಸಹ ಅದನ್ನೇ ಕುಡಿಯುತ್ತಾರೆ. ಹಾಗಾಗಿ ಅಶುದ್ಧ ನೀರಿನಿಂದಾಗಿ ಅಪಾಯವಾಗುವ ಮುನ್ನವೇ ಎಚ್ಚರ ವಹಿಸಬೇಕು’ ಎಂದು ಕೋರಿದ್ದಾರೆ.

‘ತಹಶೀಲ್ದಾರ್ ಹಾಗೂ ಸಹಾಯಕ ಆಯುಕ್ತರು ದೇವಸ್ಥಾನದ ಹಣದ ವಹಿವಾಟಿನ ಕುರಿತು ಲೆಕ್ಕಪತ್ರ ನೀಡದೆ ಏಕಪಕ್ಷೀಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಡಳಿತಾಧಿಕಾರಿಗಳು, ಸಿಬ್ಬಂದಿಯನ್ನು ಯಾರಾದರು ಪ್ರಶ್ನಿದರೆ ಏನೋ ಗೊತ್ತಿಲ್ಲ. ಮೇಲಧಿಕಾರಿಗಳಿಗೆ ಕೇಳಿ ಎಂಬ ಉತ್ತರ ಬರುತ್ತದೆ. ಮುಂಬರುವ ದಿನಗಳಲ್ಲಿಸೂಕ್ತ ಕಾರ್ಯನಿರ್ವಹಿಸುವವರೇ ದೇವಸ್ಥಾನ ಕಮಿಟಿಯ ಸದಸ್ಯರಾಗಬೇಕು. ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ದೇಗುಲದ ಅಭಿವೃದ್ಧಿಗೆ ಮುಂದಾಗಬೇಕು’ ಎಂದು ನಾಯಕ ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-30-2114351480

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.