ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಾಳ: ಜಿ.ಪಂ ಟಿಕೆಟ್‌ಗೆ ತೀವ್ರ ಸ್ಪರ್ಧೆ

Last Updated 14 ಜುಲೈ 2021, 16:28 IST
ಅಕ್ಷರ ಗಾತ್ರ

ಮುದಗಲ್: ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಮೀಸಲಾತಿ ಪ್ರಕಟಗೊಂಡಿದ್ದು, ನೂತನವಾಗಿ ರಚನೆಯಾಗಿರುವ ನಾಗರಾಳ ಜಿಲ್ಲಾ ಪಂಚಾಯಿತಿಗೆ ಕ್ಷೇತ್ರಕ್ಕೆ ಅಭ್ಯರ್ಥಿಗಳಾಗುವ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ.

ಈ ಮೊದಲು ನಾಗರಾಳ ಜಿಲ್ಲಾ ಪಂಚಾಯಿತಿ ಕ್ಷೇತ್ರ ಆನೆಹೊಸೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿತ್ತು. ಈ ಬಾರಿ ನೂತನ ಕ್ಷೇತ್ರ ರಚನೆಯಾಗಿದೆ. ಜಿಲ್ಲಾ ಪಂಚಾಯಿತಿಯ ವ್ಯಾಪ್ತಿಯಲ್ಲಿ ನಾಗರಾಳ, ಖೈರವಾಡಗಿ, ನರಕಲದಿನ್ನಿ ಎಂಬ ಮೂರು ತಾಲ್ಲೂಕುಗಳ ಗ್ರಾಮಗಳು ಬರುತ್ತವೆ.

ನಾಗರಾಳ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಪ್ರಕಟವಾಗಿದೆ. ಇದು ರಾಯಚೂರು ಜಿಲ್ಲೆಯ ಕೊನೆಯ ಭಾಗದಲ್ಲಿದೆ. ನಾಗರಾಳ ಗ್ರಾಮ ಅತಿ ಹೆಚ್ಚು ಜನಸಂಖ್ಯೆ, ವ್ಯಾಪಾರ, ವಹಿವಾಟು ಹೊಂದಿದೆ. ನಾಗರಾಳ ಜಿಲ್ಲಾ ಪಂಚಾಯಿತಿ ಚುನಾವಣೆಗೆ ವಿವಿಧ ಪಕ್ಷಗಳಿಂದ ಟಿಕೆಟ್ ಪಡೆಯಲು ಹಲವು ಆಕಾಂಕ್ಷಿಗಳು ನಾನಾ ಕಸರತ್ತು ಮಾಡುತ್ತಿದ್ದರೆ. ಅನೇಕ ಮಂದಿ ಪಕ್ಷೇತರರಾಗಿಯೂ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ.

ಕಾಂಗ್ರೆಸ್‌ದಿಂದ ಲಕ್ಕಿಹಾಳ ಗ್ರಾಮದ ಶ್ವೇತಾ ಬಸವರಾಜ ತುರಡಗಿ, ಗದ್ದೆಮ್ಮ ಗೌಡಸಾನಿ ಬಸವರಾಜಪ್ಪ ಉಪ್ಪಾರ ನಂದಿಹಾಳ, ನಾಗರಾಳ ಗ್ರಾಮದ ಶಾಂತಮ್ಮ ಹೊನ್ನಪ್ಪ ಮೇಟಿ, ಹಲ್ಕವಾಟಗಿ ಗ್ರಾಮದ ಶರಣಮ್ಮ ಮಲ್ಲಪ್ಪ ಭೋಗವತಿ ಮುಂತಾದವರ ಹೆಸರು ಕೇಳಿ ಬರುತ್ತಿದ್ದರೆ, ಬಿಜೆಪಿಯಿಂದ ಲಿಂಗಸುಗೂರು ಬಿಜೆಪಿ ಮಂಡಲದ ಅಧ್ಯಕ್ಷ ವೀರನಗೌಡ ಪಾಟೀಲ ಲಕ್ಕಿಹಾಳ ಅವರ ಪತ್ನಿ ವಿಜಯಶ್ರೀ ವೀರನಗೌಡ ಪಾಟೀಲ, ನಾಗರಾಳ ಗ್ರಾಮದ ರೇಣುಕಾ ನಿಂಗನೌಡ ಪಾಟೀಲ, ರಾಂಪುರ ಗ್ರಾಮದ ಲಲಿತಮ್ಮ ಶಿವನಗೌಡ ಪಾಟೀಲ, ನರಕಲದಿನ್ನಿ ಗ್ರಾಮದ ರಾಮಣ್ಣ ಜಾವೂರ ಅವರ ಪತ್ನಿಯ ಹೆಸರು ಕೇಳಿ ಬಂದಿದೆ.

ಜೆಡಿಎಸ್ ಪಕ್ಷದಿಂದ ಭೋಗಾಪುರ ಗ್ರಾಮದ ಸಂಗನಗೌಡರ ಅವರ ಪತ್ನಿಯ ಹೆಸರು ಕೇಳಿ ಬಂದಿದೆ. ಆಕಾಂಕ್ಷಿಗಳು ಪಕ್ಷದಲ್ಲೇ ಟಿಕೆಟ್ ಪಡೆದರೆ ಮುಂದೆ ಅನುಕೂಲವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಪಕ್ಷಗಳ ಹೈಕಮಾಂಡ್‌ ಮತ್ತು ಪ್ರಬಲ ನಾಯಕರನ್ನು ಸಂಪರ್ಕಿಸಿ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ.

ಇವರಲ್ಲದೆ ನಿಂಗಮ್ಮ ಶರಣಪ್ಪ ಅವರು ಪಕ್ಷತರ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಜಿಲ್ಲಾ ಪಂಚಾಯಿತಿ ಅಭ್ಯರ್ಥಿಯಾಗಲು ಆಕಾಂಕ್ಷಿಗಳ ದಂಡೇ ಇದೆ. ಲಿಂಗಸುಗೂರು ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಲು ಈ ಚುನಾವಣೆ ಮಹತ್ವದಾಗಿದ್ದರಿಂದ ಎಲ್ಲಾ ಪಕ್ಷದ ಮುಖಂಡರು ಜಾತಿವಾರು ಲೆಕ್ಕಚಾರದಲ್ಲಿ ಮುಳಗಿದ್ದಾರೆ.

’ಲಿಂಗಸುಗೂರು ವಿಧಾನಸಭೆ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಕಾಂಗ್ರೆಸ್ ನಲ್ಲಿದ್ದು, ದುಡಿಯುತ್ತಿದ್ದೇನೆ. ಕಳೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಯತ್ನಿಸಿದ್ದೆ. ಆಗ ಶಾಸಕ ಡಿ.ಎಸ್. ಹೂಲಗೇರಿ ನನಗೆ ಕರೆದು ಮುಂದಿನ ದಿನಗಳಲ್ಲಿ ಒಳ್ಳೆಯ ಅವಕಾಶ ಇದೆ ಎಂದು ಭರವಸೆ ನೀಡಿದ್ದರು. ಅವರ ಮಾತಿನಂತೆ ಕೆಳೆದ ಬಾರಿ ಚುನಾವಣೆಯಿಂದ ಹಿಂದೆ ಸರಿದೆ. ಈಗ ಪಕ್ಷ ಇಚ್ಛಿಸಿದರೆ ನಾಗರಾಳ ಜಿಲ್ಲಾ ಪಂಚಾಯಿತಿ ಅಭ್ಯರ್ಥಿಯಾಗುತ್ತೇನೆ. ಪಕ್ಷದಿಂದ ಅವಕಾಶ ಮಾಡಿಕೊಡಲಿ‘ ಎಂದು ಕಾಂಗ್ರೆಸ್ ಮುಖಂಡ ಹೊನ್ನಪ್ಪ ಮೇಟಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT