ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರದರ್ಶಕ ನೇಮಕಾತಿ ಪ್ರಕ್ರಿಯೆ

ಪರೀಕ್ಷೆ 26,819 ಅಭ್ಯರ್ಥಿಗಳು ಹಾಜರು– ದೀಪೇಂದ್ರ ರಾವತ್
Last Updated 19 ಡಿಸೆಂಬರ್ 2018, 13:34 IST
ಅಕ್ಷರ ಗಾತ್ರ

ರಾಯಚೂರು: ಸೈನಿಕ ನೇಮಕಾತಿ ರ್‍ಯಾಲಿಗೆ ಒಟ್ಟು 37,147 ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದು, ಇಲ್ಲಿಯವರೆಗೆ 26,819 ಅಭ್ಯರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಿದ್ದಾರೆ. ಇಲ್ಲಿ ಉತ್ತಮ ಸ್ಪದಂನೆ ವ್ಯಕ್ತವಾಗಿದ್ದು, ನೇಮಕಾತಿಯ ಎಲ್ಲ ಪ್ರಕ್ರಿಯೆಗಳು ಪಾರದರ್ಶಕವಾಗಿ ನಡೆದಿವೆ ಎಂದು ಡೆಪುಟಿ ಡೈರೆಕ್ಟರ್ ಜನರಲ್‌ ದೀಪೇಂದ್ರ ರಾವತ್‌ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸಂಖ್ಯೆಯ ಅನುಪಾತದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಇಷ್ಟೇ ಸಂಖ್ಯೆಯಲ್ಲಿ ನೇಮಕಾತಿ ನಡೆಯಲಿದೆ ಎಂದು ಹೇಳಲಾಗಲ್ಲ. ಎಲ್ಲ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಉತ್ತೀರ್ಣರಾಗಬೇಕು. ಯಾರೊಬ್ಬರೂ ಮಧ್ಯವರ್ತಿಗಳಿಗೆ ಹಣ ನೀಡಬಾರದು ಎಂದರು.

ನೇಮಕಾತಿ ಪ್ರಕ್ರಿಯೆಗೆ ಬೇಕಾಗಿರುವ ಎಲ್ಲ ಸಿದ್ಧತೆಗಳನ್ನು ಜಿಲ್ಲಾಡಳಿತ ಉತ್ತಮವಾಗಿ ಮಾಡಿದೆ. ಡಿಸೆಂಬರ್ 11ರಿಂದ 20ವರೆಗೆ ಹಮ್ಮಿಕೊಂಡಿರುವ ಈ ರ್‍ಯಾಲಿಯಲ್ಲಿ ದಿನಕ್ಕಿಷ್ಟು ಅಭ್ಯರ್ಥಿಗಳು ಬರಲು ಪ್ರವೇಶ ಪತ್ರದಲ್ಲಿ ದಿನಾಂಕವನ್ನು ನಮೂದಿಸಲಾಗಿತ್ತು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಬಂದಿದ್ದಾರೆ. ಜಿಲ್ಲಾಡಳಿತ ಹಾಗೂ ಸಂಘಟನೆಗಳಿಂದಲೂ ಅಭ್ಯರ್ಥಿಗಳಿಗೆ ಅನುಕೂಲ ಮಾಡಿದ್ದಾರೆ. ಆದರೂ, ಕೆಲ ಸಮಸ್ಯೆಗಳು ಎದುರಿಸಿದ್ದಾರೆ ಎಂದು ತಿಳಿಸಿದರು.

371 ಜೆ ಕಾಯ್ದೆಯ ಮೀಸಲಾತಿ ಈ ನೇಮಕಾತಿಗೆ ಅನ್ವಯಿಸುವುದಿಲ್ಲ. ಈ ಭಾಗದಲ್ಲಿ ಒಂದೊಂದು ಜಿಲ್ಲೆಯಿಂದ ಹೆಚ್ಚಿನ ಅಭ್ಯರ್ಥಿಗಳು ಬಂದರೆ. ಕೆಲ ಜಿಲ್ಲೆಗಳಿಂದ ಕಡಿಮೆ ಅಭ್ಯರ್ಥಿಗಳು ಬರುತ್ತಾರೆ. ಜಿಲ್ಲೆಯವರು ಕಡಿಮೆ ಸಂಖ್ಯೆಯಲ್ಲಿ ನೇಮಕಾತಿಗೆ ಬಂದಿದ್ದಾರೆ. ಈ ಭಾಗದ ಅಭ್ಯರ್ಥಿಗಳು ಬಲಿಷ್ಠರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಳಗಾವಿ ನೇಮಕಾತಿ ಡೈರೆಕ್ಟರ್‌ ದಂಗ್ವಾಲ್, ಮಂಗಳೂರಿನ ರಾಜಮನ್ನಾರ, ತ್ರಿವೇಂದ್ರಂ ಸಂಜಯ ಪಟ್ನಾಯಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT