ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲದಲ್ಲಿದೆ ಸಾರಿಗೆ ಇಲಾಖೆ: ಆರ್‌.ಅಶೋಕ್‌

Last Updated 12 ಏಪ್ರಿಲ್ 2021, 12:19 IST
ಅಕ್ಷರ ಗಾತ್ರ

ಮಸ್ಕಿ (ರಾಯಚೂರು): ‘ಲಾಕ್‌ಡೌನ್‌ ಅವಧಿಯಲ್ಲಿ ಸಾರಿಗೆಯಿಂದ ಆದಾಯ ಇಲ್ಲದಿದ್ದರೂ ಸಂಬಳ ಕೊಟ್ಟಿದ್ದೇವೆ. ಸಾಲ‌ಮಾಡಿ ಸಾರಿಗೆ ಇಲಾಖೆ ನಿರ್ವಹಿಸಲಾಗುತ್ತಿದೆ. ಮುಷ್ಕರ ಕೈಬಿಟ್ಟು ನೌಕರಿಗೆ ಹಾಜರಾದರೆ ಮಾತ್ರ ಮಾತುಕತೆ ನಡೆಸಲಾಗುವುದು’ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಲ್ಲಿ ಲಾಕ್‌ಡೌನ್‌ ಅವಧಿಯಲ್ಲಿ ಸಾರಿಗೆ ನೌಕರರ ವೇತನ ಕಡಿತಗೊಳಿಸಿದ್ದರು. ಆದರೆ ರಾಜ್ಯದಲ್ಲಿ ಕೆಲಸ ಮಾಡದಿದ್ದರೆ ವೇತನ ನೀಡಲಾಗಿದೆ. ನೌಕರರು ಇದನ್ನ ನೆನಪು ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

‘ಕೋವಿಡ್ ಕಷ್ಟವಿರುವ ಸಮಯದಲ್ಲಿ ನೌಕರರು ಮುಷ್ಕರ ಮಾಡುವುದು ಸಾರ್ವಜನಿಕರಿಗೆ ಅವಮಾನ ಮಾಡಿದಂತೆ. ಎರಡು ದಿನದಲ್ಲಿ ಕೆಲಸಕ್ಕೆ ಹಾಜರಾಗುತ್ತಾರೆ ಎನ್ನುವ ನಂಬಿಕೆಯಿದೆ. ಮುಷ್ಕರ ಮಾಡಿಸುತ್ತಿರುವವರಿಗೆ ರೈತರ ಬಗ್ಗೆ ಕಾಳಜಿಯಿಲ್ಲ. ರೈತರೆಲ್ಲ ಬಹುತೇಕ ತಾವು ಬೆಳೆದಿರುವ ತರಕಾರಿಗಳನ್ನು ಬಸ್‌ಗಳ ಮೂಲಕವೆ ಸಾಗಿಸುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT