ಗುರುವಾರ , ನವೆಂಬರ್ 21, 2019
22 °C

ತುಂಗಭದ್ರಾದಲ್ಲಿ ಪ್ರವಾಹ ಹೆಚ್ಚಳ: ಮುನ್ನೆಚ್ಚರಿಕೆ

Published:
Updated:

ರಾಯಚೂರು: ತುಂಗಭದ್ರಾ ಅಣೆಕಟ್ಟೆಯಿಂದ ಹೊರಬಿಡುವ ನೀರಿನ ಪ್ರಮಾಣ 1.5 ಲಕ್ಷ ಕ್ಯುಸೆಕ್ ಅಡಿಗೆ ಹೆಚ್ಚಳವಾಗಿದ್ದು, ನದಿತೀರದತ್ತ ತೆರಳದಂತೆ ನದಿದಂಡೆಯ ಗ್ರಾಮಸ್ಥರಿಗೆ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡುತ್ತಿದ್ದಾರೆ.

ಸಿಂಧನೂರು ವ್ಯಾಪ್ತಿಯ ಸಿಂಗಾಪುರ, ಮುಕ್ಕುಂದ, ಒಳಬಳ್ಳಾರಿ, ದಡೆಸ್ಗೂರು, ಮಾನ್ವ ತಾಲ್ಲೂಕಿನ ಚಿಕಲಪರ್ವಿ ಹಾಗೂ ರಾಯಚೂರು ತಾಲ್ಲೂಕಿನ  ಎಲೆಬಿಚ್ಚಾಲಿ, ಕಟಕನೂರು, ಹಳೆತುಂಗಭದ್ರಾ, ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ತುಂಗಭದ್ರಾ ನದಿ ಪ್ರವಾಹವು ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಬಿಚ್ಚಾಲಿಯಲ್ಲಿರುವ ಶ್ರೀ ರಾಘವೇಂದ್ರ ತೀರ್ಥರ ಜಪದಕಟ್ಟೆಗೆ ತಲುಪಿದ್ದು, ಸಂಜೆ ವೇಳೆಗೆ ಕಟ್ಟೆ ಜಲಾವೃತವಾಗಲಿದೆ. 

**

ತುಂಗಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ (22–10–2019)

ಜಲಾಶಯ;ಗರಿಷ್ಠ ಮಟ್ಟ;ಇಂದಿನ ಮಟ್ಟ;ಒಳಹರಿವು;ಹೊರಹರಿವು 

ತುಂಗಭದ್ರಾ;1,633; 1,632.05; 1,55,431; 1,65,000
 

ಪ್ರತಿಕ್ರಿಯಿಸಿ (+)