ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಶೈಲದಲ್ಲಿ ವೈಭವದೊಂದಿಗೆ ನೆರವೇರಿದ ರಥೋತ್ಸವ

Last Updated 2 ಏಪ್ರಿಲ್ 2022, 15:32 IST
ಅಕ್ಷರ ಗಾತ್ರ

ರಾಯಚೂರು: ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಸುಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ರಥೋತ್ಸವವು ಶನಿವಾರ ವೈಭವೋಪೇತವಾಗಿ ಜರುಗಿತು.

ರಥಬೀದಿಯುದ್ದಕ್ಕೂ ಹಾಗೂ ಕಟ್ಟಡಗಳ ಮೇಲೆ ನೆರೆದಿದ್ದ ಲಕ್ಷಾಂತರ ಭಕ್ತರು ಓಂ ನಮಃ ಶಿವಾಯ ಎಂದು ಉದ್ಘೋಷಣೆ ಮಾಡುತ್ತಾ ಶಿವನಾಮ ಸ್ಮರಣೆಯೊಂದಿಗೆ ರಥೋತ್ಸವವನ್ನು ಕಣ್ತುಂಬಿಕೊಂಡರು. ರಥದ ಮೇಲೆ ಸಕ್ಕರೆ ಬೆತ್ತುಸ್, ಕಾರಿಕು ತೂರಿ ಹರಕೆ ಕಟ್ಟಿಕೊಂಡು ಭಕ್ತಿಭಾವದಿಂದ ನಮಸ್ಕರಿಸಿದರು.

ಯುಗಾದಿ ಪಾಢ್ಯ ದಿನದಂದು ನಡೆಯುವ ಈ ರಥೋತ್ಸವ ನೋಡುವುದಕ್ಕೆ ದೇಶದ ವಿವಿಧೆಡೆಯಿಂದ ಭಕ್ತರು ನೆರೆದಿದ್ದರು. ಮುಖ್ಯವಾಗಿ ಕರ್ನಾಟಕದ ಉತ್ತರ ಭಾಗದ ಜಿಲ್ಲೆಗಳಿಂದ ಸಾವಿರಾರು ಜನರು ಪ್ರತಿವರ್ಷ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾ ಬರುತ್ತಿರುವುದು ವಿಶೇಷ.

ಕಳೆದ ಬುಧವಾರ ನಡೆದ ಗಲಾಟೆಯನ್ನು ಸಂಪೂರ್ಣ ಮರೆತು, ವ್ಯಾಪಾರಿಗಳು ಅಂಗಡಿ ಮುಗ್ಗಟ್ಟು ತೆರೆದುಕೊಂಡಿದ್ದರು. ಭಕ್ತರು ನಿರಾಂತಕವಾಗಿ ಉತ್ಸವದಲ್ಲಿ‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT