ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಬದುಕು ರೂಪಿಸುವ ಗ್ರಂಥ

ಅಮರೇಶ್ವರ ಕ್ಯಾಂಪಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣ
Last Updated 14 ಮೇ 2022, 14:19 IST
ಅಕ್ಷರ ಗಾತ್ರ

ಮಾನ್ವಿ: ‘ನಮ್ಮ್ಮ ದೇಶದ ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೂ ಗೌರವಾನ್ವಿತ ಬದುಕು ರೂಪಿಸುವ ಮಹಾನ್ ಗ್ರಂಥವಾಗಿದೆ’ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.

ಶನಿವಾರ ತಾಲ್ಲೂಕಿನ ಅಮರೇಶ್ವರ ಕ್ಯಾಂಪಿನಲ್ಲಿ ಆಯೋಜಿಸಲಾಗಿದ್ದ ಡಾ.ಬಿಆರ್ ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ ಡಾ.ಬಿ.ಆರ್.ಅಂಬೇಡ್ಕರ್ ಅವರು ಈ ದೇಶ ಕಂಡ ಶ್ರೇಷ್ಠ ಚಿಂತಕರಲ್ಲೊಬ್ಬರು. ಎಲ್ಲಾ ಶೋಷಿತ ಜನಾಂಗಗಳು ಸರ್ವಾಂಗೀಣ ಪ್ರಗತಿ ಹೊಂದುವ ಮೂಲಕ ಅಂಬೇಡ್ಕರ್ ಅವರ ಕನಸು ನನಸಾಗಿಸಬೇಕು’ ಎಂದರು.

ಮಾಜಿ ಶಾಸಕ ಗಂಗಾಧರ ನಾಯಕ, ಮಾದಿಗ ಮಹಾಸಭಾದ ಜಿಲಾ ಘಟಕದ ಅ್ಲಧ್ಯಕ್ಷ ಎ. ಬಾಲಸ್ವಾಮಿ ಕೊಡ್ಲಿ ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿ ಸಂಘಟನೆಯ ರಾಜ್ಯ ಮುಖಂಡ ಅಂಬಣ್ಣ ಆರೋಲಿಕರ್ ಮಾತನಾಡಿದರು.

ಜಿ.ಪಂ ಮಾಜಿ ಅಧ್ಯಕ್ಷ ದೊಡ್ಡಬಸ್ಸಪ್ಪಗೌಡ ಭೋಗಾವತಿ, ಎಪಿಎಂಸಿ ಸದಸ್ಯ ಹನುಮೇಶ ಮದ್ಲಾಪೂರು, ಗ್ರಾ,ಪಂ ಅಧ್ಯಕ್ಷೆ ಪಾರ್ವತಿ ಶೇಖರಪ್ಪ, ನಾಯಕ, ಮಾದಿಗ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಯೇಸುರಾಜ್ ಅಮರೇಶ್ವರ ಕ್ಯಾಂಪ್, ಸುಂದರ ಕಪಗಲ್, ಬಸವರಾಜ ಕೇಸರಿ, ಪ್ರಭುರಾಜ್ ಕೊಡ್ಲಿ, ಶಿವರಾಜ್ ಉಮಳಿಹೊಸೂರು, ಗೋಪಾಲಕೃಷಮೂರ್ತಿ, ಮ್ಯಾಕಲ್ ಅಯ್ಯಪ್ಪ ನಾಯಕ, ಜೆ.ಎಚ್.ದೇವರಾಜ, ಗ್ರಾ.ಪಂ ಸದಸ್ಯ ವಿರೇಶ ನಾಯಕ ಮತ್ತಿತರರು ಇದ್ದರು.

ಗೌರೀಶ್ ಸ್ವಾಗತಿಸಿದರು. ಶಿಕ್ಷಕ ಹರ್ಷವರ್ಧನ ನಿರೂಪಿಸಿದರು. ಈರೇಶ ನಾಯಕ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT