ಹಲ್ಲೆ ಆರೋಪಿಗಳ ಬಂಧನಕ್ಕೆ ಒತ್ತಾಯ

7
ಕೆಪಿಆರ್‌ಎಸ್‌ ಜಿಲ್ಲಾ ಅಧ್ಯಕ್ಷ ಡಿ.ವೀರನಗೌಡ ಮೇಲೆ ಹಲ್ಲೆಗೆ ಖಂಡನೆ

ಹಲ್ಲೆ ಆರೋಪಿಗಳ ಬಂಧನಕ್ಕೆ ಒತ್ತಾಯ

Published:
Updated:
Deccan Herald

ರಾಯಚೂರು: ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಡಿ.ವೀರನಗೌಡರ ಮೇಲೆ ಹಲ್ಲೆ ನಡೆಸಿ ಕೊಲೆ ಯತ್ನಿಸಿರುವ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಸಂಘದ ತಾಲ್ಲೂಕು ಘಟಕದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಜಿಲ್ಲೆಯ ಮಾನ್ವಿ ತಾಲ್ಲೂಕಿನ ಮಲ್ಲಿಗೆಮಡು ಗ್ರಾಮದ ಕಂದಾಯ ಭೂಮಿಯೊಂದರ ಸರ್ವೆ ಕಾರ್ಯದಲ್ಲಿ ಭಾಗಿಯಾಗಲು ತೆರಳಿದ್ದ ಡಿ.ವೀರನಗೌಡರ ಮೇಲೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಮುಖಂಡ ಬಸವರಾಜ ಗುಂಪು ಕಟ್ಟಿಕೊಂಡು ಏಕಾಏಕಿ ಹಲ್ಲೆ ಮಾಡಿದ್ದಾರೆ. ರಕ್ಷಣೆಗೆ ಬಂದ ಸಂಘದ ಮುಖಂಡ ಪ್ರಕಾಶ ಅವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಬಸವರಾಜ ಅವರು ತಮ್ಮ ಕುಟುಂಬದವರೇ ಆಗಿರುವ ಸೋದರ ಅತ್ತೆಗೆ ಮಹಾಂತಮ್ಮ ಆಸ್ತಿಯ ಹಕ್ಕು ವಂಚನೆ ಮಾಡಲು ಮುಂದಾಗಿದ್ದಾರೆ. ಆದ್ದರಿಂದ ಕೊಲೆ ಯತ್ನಿಸಿರುವ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದರು.

ಕಾನೂನಾತ್ಮಕವಾಗಿ ಸರ್ವೆ ನಡೆಸಲು ಬಂದ ಅಧಿಕಾರಿಗಳಿಗೆ ಬೆದರಿಕೆ ಹಾಕಿ, ಸರ್ವೆ ಕಾರ್ಯ ನಡೆಸದಂತೆ ಅಧಿಕಾರಿಗಳ ಕರ್ತವ್ಯಕ್ಕೆ ಚ್ಯುತಿ ಮಾಡಿದ್ದಾರೆ. ಸೌಹಾರ್ದಯುತವಾಗಿ ಬಗೆಹರಿಯುವುದನ್ನು ಹಣದ ಆಮಿಷಕ್ಕಾಗಿ ಅಧಿಕಾರಿಗಳು ಸರ್ವೆ ಕಾರ್ಯವನ್ನು ಮುಂದೂಡತ್ತ ಬಂದು ಈ ಹಂತಕ್ಕೆ ತಂದಿದ್ದಾರೆ. ಮಹಾಂತಮ್ಮಗೆ ಆಸ್ತಿ ಸಿಗುವಂತೆ ಕ್ರಮ ಜರುಗಿಸಿ, ಸೂಕ್ತ ರಕ್ಷಣೆ ಒದಗಿಸಬೇಕು. ಸುಳ್ಳು ಮೊಕದ್ದಮೆ ಹಿಂದಕ್ಕೆ ಪಡೆದು ಈ ಘಟನೆಗೆ ಕಾರಣೀಭೂತರಾದ ಎಡಿಎಲ್‌ಆರ್‌ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವೀರೇಶ, ತಾಲ್ಲೂಕು ಅಧ್ಯಕ್ಷ ರಂಗನಗೌಡ ಕೊತ್ತದೊಡ್ಡಿ, ರಂಗಪ್ಪ, ಜಿಲಾನಿ ಪಾಷ, ಯಂಕಪ್ಪ, ಗೋವಿಂದ, ತಿಪ್ಪಯ್ಯ, ಜೆಂಗ್ಲೆಪ್ಪ, ನರಸಪ್ಪ, ಆಂಜನೇಯ, ಈರೇಶ, ಗುರುಸ್ವಾಮಿ, ಹಂಪಯ್ಯ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !