ಯುವಕನ ಕೊಲೆ ಪ್ರಕರಣ ಸಿಒಡಿಗೆ ವಹಿಸಲು ಒತ್ತಾಯ

7

ಯುವಕನ ಕೊಲೆ ಪ್ರಕರಣ ಸಿಒಡಿಗೆ ವಹಿಸಲು ಒತ್ತಾಯ

Published:
Updated:

ರಾಯಚೂರು: ಲಿಂಗಸುಗೂರು ತಾಲ್ಲೂಕಿನ ಗುರುಗುಂಟಾ ಗ್ರಾಮದ ಯುವಕ ರಮೇಶ ಕೊಲೆಯಲ್ಲಿ ಪ್ರಭಾವಿಗಳ ಕೈವಾಡವಿದ್ದು, ಹಟ್ಟಿ ಪೊಲೀಸರು ಯಾವುದೇ ಕ್ರಮ ಜರುಗಿಸುತ್ತಿಲ್ಲ. ಆದ್ದರಿಂದ, ಈ ಪ್ರಕರಣವನ್ನು ಸಿಒಡಿ ತನಿಖೆಗೆ ನೀಡಬೇಕು ಎಂದು ಕ್ಷತ್ರೀಯ ಸಮಾಜದ ಮುಖಂಡ ಶರಣಯ್ಯ ಪವಾರ ಒತ್ತಾಯಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಮೇಶ ಗೆಳೆಯರಾದ ಹುಲಿಗೆಪ್ಪ ನಾಯಕ, ಶರಣಬಸವ, ರವಿ, ಬಸವರಾಜ ಕುತಂತ್ರದಿಂದ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ. ಜೂನ್‌ 26ರಂದು ಕೊಲೆ ನಡೆದಿದ್ದು, ಇದುವರೆಗೆ ಪೊಲೀಸರು ಯಾವುದೇ ತನಿಖೆ ಕೈಗೊಂಡಿಲ್ಲ ಎಂದು ದೂರಿದರು.

ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಇನ್ನೂ ಬಂದಿಲ್ಲ. ಪಿಎಸ್‌ಐ ಸೂಚನೆ ಮೇರೆಗೆ ಹೋದರೂ ವರದಿ ನೀಡುತ್ತಿಲ್ಲ. ಪೊಲೀಸರು ವರದಿಯನ್ನು ತರಿಸಿಕೊಂಡಿಲ್ಲ. ಆರೋಪಿಗಳ ರಕ್ಷಣೆಗೆ ತಂತ್ರಗಳು ನಡೆದಿವೆ ಎಂದು ಆರೋಪಿಸಿದರು.

ಕೊಲೆಯಾದ ರಮೇಶ ತಾಯಿ ಲಿಂಗಮ್ಮ ಮಾತನಾಡಿ, ವ್ಯಾಪಾರಿ ತಿಮ್ಮಾರೆಡ್ಡಿ ಕೊಲೆ ಮಾಡಿಸಿದ್ದು, ಯಾವ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂಬುದು ಗೊತ್ತಿಲ್ಲ. ಪೊಲೀಸರು ಕ್ರಮ ಜರುಗಿಸದೇ ನಿರ್ಲಕ್ಷ್ಯ ವಹಿಸಿದ್ದು, ಸೂಕ್ತ ತನಿಖೆ ನಡೆಸಿ ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಿದರು.

ಅಮರೇಶ, ಹನುಮೇಶ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !