ವೇತನ, ಸೌಲಭ್ಯ ನೀಡದ ಏಜೆನ್ಸಿ ವಿರುದ್ಧ ಕ್ರಮಕ್ಕೆ ಒತ್ತಾಯ

7
ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಹೊರಗುತ್ತಿಗೆ ಸಿಬ್ಬಂದಿ ಪ್ರತಿಭಟನೆ

ವೇತನ, ಸೌಲಭ್ಯ ನೀಡದ ಏಜೆನ್ಸಿ ವಿರುದ್ಧ ಕ್ರಮಕ್ಕೆ ಒತ್ತಾಯ

Published:
Updated:
Prajavani

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ನಿಲಯಗಳಲ್ಲಿ ಕೆಲಸ ಮಾಡುತ್ತಿರುವ ಡಿ ಗ್ರೂಪ್‌ ನೌಕರರಿಗೆ ವೇತನ ಹಾಗೂ ಇತರೆ ಸೌಲಭ್ಯ ನೀಡದ ಏಜೆನ್ಸಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕ ಹಾಗೂ ಜಿಲ್ಲಾ ಘಟಕದ ನೇತೃತ್ವದಲ್ಲಿ ನೌಕರರು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿ ಎದುರಿಗೆ ಬುಧವಾರ ಧರಣಿ ನಡೆಸಿದರು.

ಇಲಾಖೆಯ ಅಧೀನದಲ್ಲಿರುವ ವಸತಿ ನಿಲಯಗಳಲ್ಲಿ ಒಟ್ಟು 307 ಡಿ ಗ್ರೂಪ್‌ ನೌಕರರು ಕೆಲಸ ಮಾಡುತ್ತಿದ್ದು, ಎಆರ್‌ಸಿ ಇನ್‌ಸ್ಟಿಟ್ಯೂಟ್‌ ಆಫ್‌ ಇನ್‌ಫಾರ್‌ಮೇಷನ್‌ ಟೆಕ್ನಾಲಜಿಯಿಂದ 2017–18ನೇ ಸಾಲಿನಲ್ಲಿ ಕಾರ್ಮಿಕ ಇಲಾಖೆ ನಿಗದಿಪಡಿಸಿರುವ ವೇತನವನ್ನು ನೀಡಲು ಆದೇಶವಿದೆ. ಆದರೆ, ಸೇವಾ ದೃಢೀಕರಣ ಪತ್ರ ನೀಡದೇ, ಪಿಎಫ್‌ ಹಾಗೂ ಇಎಸ್‌ಐ ನೀಡಿಲ್ಲ ಎಂದು ಆರೋಪಿಸಿದರು.

ಇಎಸ್‌ಐ ಕಡಿತಗೊಂಡ ವಿವರವನ್ನು ಸಿಬ್ಬಂದಿ ನೀಡಿಲ್ಲ. ಸಿಬ್ಬಂದಿ ಹೆಸರಿನಲ್ಲಿ ವೈಯಕ್ತಿಕ ಇಪಿಎಫ್‌ ಖಾತೆಯೂ ತೆರೆಯದೇ ಮೋಸ ಮಾಡಿರುವ ಏಜೆನ್ಸಿ ವಿರುದ್ಧ ಮೊಕದ್ದಮೆ ದಾಖಲು ಮಾಡಬೇಕು. 2019ರ ಜನವರಿ ತಿಂಗಳವರೆಗೆ ಏಜನ್ಸಿಗೆ ಗುತ್ತಿಗೆ ನೀಡಲಾಗಿದ್ದು, ಅಷ್ಟರೊಳಗೆ ಸಿಬ್ಬಂದಿಗೆ ಬರಬೇಕಾದ ಇಪಿಎಫ್‌, ಇಎಸ್‌ಐ ಹಣ ಮಾಡಬೇಕು ಎಂದು ಆಗ್ರಹಿಸಿದರು.

ಒಂಭತ್ತು ತಿಂಗಳಿಂದ ವೇತನ ನೀಡದೇ ಬಾಕಿ ಉಳಿಸಿಕೊಂಡಿದ್ದು, ವೇತನವಿಲ್ಲದೇ ನೌಕರರು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಶೀಘ್ರ ವೇತನ ನೀಡಬೇಕು. ಇಪಿಎಫ್‌, ಇಎಸ್‌ಐ ಕಡಿತಗೊಂಡ ವಿವರವನ್ನು ಸಿಬ್ಬಂದಿಗೆ ನೀಡಬೇಕು. ನೇಮಕಗೊಂಡಿರುವ ಸಿಬ್ಬಂದಿ ಯಾದಿಯನ್ನು ದೃಢೀಕೃತಗೊಳಿಸಿ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಘಟಕದ ಸಂಘಟನಾ ಸಂಚಾಲಕ ಎಂ.ಈರಣ್ಣ, ಜಿಲ್ಲಾ ಸಂಚಾಲಕ ನರಸಿಂಹ ನೆಲಹಾಳ, ಶಾಂತರಾಜ, ನರಸಿಂಹ ಗಧಾರ, ಲಕ್ಷ್ಮೀ, ಮಾರೆಪ್ಪ, ಸಾದಿಕ್, ಬಾಬು, ವೀರೇಶ, ನಾಗರಾಜ, ನರಸಿಂಗಮ್ಮ, ರತ್ನಮ್ಮ, ಉರುಕುಂದಮ್ಮ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !