ಜೇಷ್ಠತೆ ವಿಸ್ತರಿಸುವ ಕಾಯ್ದೆ ಅನುಷ್ಠಾನಕ್ಕೆ ಒತ್ತಾಯ

7
ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿ ನೇತೃತ್ವದಲ್ಲಿ ಧರಣಿ

ಜೇಷ್ಠತೆ ವಿಸ್ತರಿಸುವ ಕಾಯ್ದೆ ಅನುಷ್ಠಾನಕ್ಕೆ ಒತ್ತಾಯ

Published:
Updated:
Prajavani

ರಾಯಚೂರು: ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳನ್ವಯ ಹುದ್ದೆಗಳಿಗೆ ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮದ ಜೇಷ್ಠತೆ ವಿಸ್ತರಿಸುವ 2017 ಕಾಯ್ದೆಯನ್ನು ಅನುಷ್ಠಾನ ಮಾಡಬೇಕು. ಜೊತೆಗೆ ಹಿಂಬಡ್ತಿ ಆದೇಶ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿ ನೇತೃತ್ವದಲ್ಲಿ ನೌಕರರು ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ಜೇಷ್ಠತೆ ವಿಸ್ತರಿಸುವ ಕಾಯ್ದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. ರಾಜ್ಯ ಸರ್ಕಾರವು ಕಳೆದ ವರ್ಷ ಜೂನ್‌ನಲ್ಲಿ ಗೆಜೆಟ್‌ನಲ್ಲಿ ಪ್ರಕಟಿಸಿ, ಜಾರಿಗೊಳಿಸಿದೆ. ಬಿ.ಕೆ.ಪವಿತ್ರಾ ಪ್ರಕರಣದಲ್ಲಿ ಪರಿಷ್ಕರಿಸಿರುವ ಎಲ್ಲ ಜೇಷ್ಠತೆ ರದ್ದುಗೊಳಿಸಿ, ಹಿಂಬಡ್ತಿ, ಮುಂಬಡ್ತಿ ರದ್ದುಗೊಳಿಸಿರುವುದನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಆಗ್ರಹಿಸಿದರು.

ಹಿಂಬಡ್ತಿ ಹೊಂದಿದ ನೌಕರರ ಹಿಂಬಡ್ತಿ ಹೊಂದಿದ ದಿನಾಂಕದಿಂದ ಪೂರ್ವ ಅನ್ವಯಗೊಳಿಸಿ ಜಾರಿಗೊಳಿಸುವುದು ಹಿಂಪಡೆಯಬೇಕು. ಮೃತರಾದ, ನಿವೃತ್ತರಾದವರಿಗೆ ಎಲ್ಲ ಆರ್ಥಿಕ ಸೌಲಭ್ಯಗಳು ನೀಡಬೇಕು. ಬಡ್ತಿ ಹೊಂದಿದ ನೌಕರರ ಜೇಷ್ಠತೆಯನ್ನು ವೃಂದದಲ್ಲಿ ಸಲ್ಲಿಸಿದ ಸೇವಾ ಆಧಾರದ ಮೇಲೆ ನಿರ್ಧರಿಸಬೇಕು ಎಂದು ಒತ್ತಾಯಿಸಿದರು.

ಎಸ್.ಹನುಮಂತಪ್ಪ, ಶಿವರಾಜ, ವಸಂತಕುಮಾರ, ಬಾಬು, ಶರಣಪ್ಪ ದಿನ್ನಿ, ಜಗದೀಶ್, ವೆಂಕಟೇಶ, ಸತ್ಯನಾಥ, ಗೌತಮ್ ಕಟ್ಟಿಮನಿ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !