ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಮುಂದುವರೆಸಲು ಆಗ್ರಹ

Last Updated 27 ಜುಲೈ 2020, 13:14 IST
ಅಕ್ಷರ ಗಾತ್ರ

ರಾಯಚೂರು: ಭೋವಿ, ಬಂಜಾರ, ಕೊರಮ, ಕೊರಚ, ಜಾತಿಗಳನ್ನು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಮುಂದುವರೆಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಭೋವಿ (ವಡ್ಡರ) ಸಂಘದ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಸೋಮವಾರ ಮನವಿ ಸಲ್ಲಿಸಿದರು.

ಸ್ವತಂತ್ರ ಪೂರ್ವದಲ್ಲಿ ಮಿಲ್ಲರ್ ಆಯೋಗದ ವರದಿಯನುಸಾರ ಈ ನಾಲ್ಕು ಜಾತಿಗಳು ಶೋಷಿತ ವರ್ಗಗಳ ಪಟ್ಟಿಯಲ್ಲಿದ್ದವು. 1950ರ ಸ್ವತಂತ್ರ ಭಾರತದ ಪ್ರಥಮ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಅಂದಿನ ಮೈಸೂರು ಪ್ರಾಂತ್ಯದ ಸರ್ಕಾರದಲ್ಲಿ ರಾಷ್ಟ್ರಪತಿ ಅವರ ಆದೇಶದಂತೆ ಈ ಜಾತಿಗಳು ಸೇರಿದವು. ಸ್ವತಂತ್ರ ನಂತರವೂ ಈ ಜಾತಿಗಳಿಗೆ ಯಾವುದೇ ಸ್ವತಂತ್ರ ದೊರಕಿಸಿಲ್ಲ. ಈಗ ಈ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆಯಲು ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದರು.

ಈ ಜಾತಿಗಳು ಶೈಕ್ಷಣಿಕ, ಸಾಮಾಜಿಕ ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಮುಂದುವರೆಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣ, ನಾರಯಣ ನಾಯ್ಕ್, ಗೋವಿಂದ ನಾಯ್ಕ, ನರಸಿಂಹಲು, ಶಶಿಕಲಾ ಬೀಮರಾಯ, ಮಾಲಾ ಭಜಂತ್ರಿ, ಈರಣ್ಣ ಮಟಮಾರಿ, ಈರಣ್ಣ , ಈರಣ್ಣ ದೇವಿನಗರ, ವೀರೇಶ ಜಲಾಲ್ ನಗರ, ಯಂಕಪ್ಪ, ಮಲ್ಲಪ್ಪ, ಹುಲಿಗೆಪ್ಪ, ಹನುಮಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT