ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ನ್ಯಾಯಾಧೀಶರ ಮೇಲೆ ಕ್ರಮಕ್ಕೆ ವಿವಿಧ ಸಂಘಟನೆಗಳ ಒತ್ತಾಯ

Last Updated 31 ಜನವರಿ 2022, 14:58 IST
ಅಕ್ಷರ ಗಾತ್ರ

ರಾಯಚೂರು: ಗಣರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶರು ಡಾ.ಬಿ.ಆರ್. ಅಂಬೇಡ್ಕರ್ ಪೋಟೋ ತೆಗೆದಿರಿಸಿ ಧ್ವಜಾರೋಹಣ ಮಾಡಿದ ಘಟನೆ ಖಂಡಿಸಿ ದಲಿತಪರ ಸಂಘಟನೆ, ಕುರುಬ ಸಮಾಜ, ರಾಯಚೂರು ಚೆನ್ನದಾಸರ ಸಮಾಜ ಸೇವ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮುಖ್ಯಮಂತ್ರಿ, ರಾಜ್ಯಪಾಲರಿಗೆ ಸೋಮವಾರ ಮನವಿ ಸಲ್ಲಿಸಿದರು.

ಗಣರಾಜ್ಯೋತ್ಸವದ ವೇಳೆ ಧ್ವಜ ಸ್ತಂಭದ ಬಳಿ ಇಟ್ಟ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪೋಟೋ ತೆಗೆದರೆ ಮಾತ್ರ ಧ್ವಜಾರೋಹಣ ಮಾಡುವುದಾಗಿ ಪಟ್ಟು ಹಿಡಿದು ಧ್ವಜಾರೋಹಣ ಮಾಡಿ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಉದ್ಧಟತನ ಮೆರೆದು ಅಗೌರವ ತೋರಿದ್ದಾರೆ. ಸಂವಿಧಾನಕ್ಕೆ ಗೌರವಿಸಿ ಇತತರಿಗೆ ಮಾದರಿಯಾಗಬೇಕಿದ್ದ ನ್ಯಾಯಾಧೀಶರು ತಮ್ಮ ಹುದ್ದೆಗೆ ಘನತೆಗೆ ಧಕ್ಕೆ ತಂದಿದ್ದಾರೆ. ಕೂಡಲೇ ಅವರು ನೀಡಿರುವ ತೀರ್ಪುಗಳನ್ನು ಪರಮಾರ್ಶಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸೇವೆಯಿಂದ ವಜಾಗೊಳಿಸಬೇಖು ಎಂದು ಜಿಲ್ಲಾ ಕುರುಬರ ಸಂಘದಿಂದ ಒತ್ತಾಯಿಸಲಾಯಿತು.

ಜಿಲ್ಲಾಧ್ಯಕ್ಷ ಕೆ.ಬಸವಂತಪ್ಪ, ಕಾರ್ಯಾಧ್ಯಕ್ಷ ಬಿ.ಬಸವರಾಜ, ಕೆ.ವೇಣುಗೋಪಾಲ, ಕೆ.ಪಂಪಾಪತಿ, ಡಿ.ಜೆ ಕೇಶವ, ಕೆ.ನಾಗರಾಜ ಇದ್ದರು.

ಚೆನ್ನದಾಸರ ಸಮಾಜ: ಗಣರಾಜ್ಯೋತ್ಸವದ ವೇಳೆ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಜಿಲ್ಲಾ ನ್ಯಾಯಾಧೀಶರ ವಿರುದ್ಧ ದೇಶದ್ರೋಹಿ ಪ್ರಕರಣ ದಾಖಲಿಸಬೇಕು. ಅವರು ನ್ಯಾಯಾಧೀಶರ ಸ್ಥಾನದಲ್ಲಿ ಮುಂದುವರೆಯಲು ಅನರ್ಹರು ಕೂಡಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿ ರಾಯಚೂರು ಚೆನ್ನದಾಸರ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಗೋವಿಂದಪ್ಪ, ಗೌರವಾಧ್ಯಕ್ಷ ಬಾಲಚಂದ್ರಪ್ಪ, ಹನುಮಂತ ಖಾನಾಪುರು, ಶ್ರೀನಿವಾಸ, ರಂಗಮುನಿದಾಸ, ಮುದುಕಪ್ಪ, ಸೋಮು, ದೇವೆಂದ್ರಪ್ಪ, ಶರಣಬಸವ, ಹರಿದಾಸ, ಗೋವಿಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT