ಬುಧವಾರ, ನವೆಂಬರ್ 20, 2019
21 °C

ಮೂಲ ಸೌಕರ್ಯ ಒದಗಿಸಲು ಅಂಬೇಡ್ಕರ್ ಜಿಲ್ಲಾ ಸೇನೆ ಆಗ್ರಹ

Published:
Updated:
Prajavani

ರಾಯಚೂರು: ನಗರದ ವಾರ್ಡ್ ಸಂಖ್ಯೆ 3 ರಲ್ಲಿ ರಸ್ತೆಗಳು ಹದಗೆಟ್ಟಿದ್ದು, ಬೀದಿ ದೀಪಗಳಿಲ್ಲ ಹಾಗೂ ಇತರೆ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಅಂಬೇಡ್ಕರ್ ಸೇನೆ ಜಿಲ್ಲಾ ಸಮಿತಿ ಆಗ್ರಹಿಸಿತು.

ಶುಕ್ರವಾರ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸ್ಥಾನಿಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ವಾರ್ಡ್ 3 ರಲ್ಲಿ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಮೂಲಸೌಕರ್ಯ ಕಲ್ಪಿಸುವಂತೆ ನಗರಸಭೆ ಪ್ರಭಾರಿ ಪೌರಾಯುಕ್ತ ಮಲ್ಲಿಕಾರ್ಜುನ ಗೋಪಿ ಶೆಟ್ಟಿ, ಹಾಗೂ ಎಇಇ ಕೃಷ್ಣಪ್ಪ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿ, ಐಬಿಯಿಂದ ಹೊಸಮನಿ ಮದರ್ ಟ್ರಸ್ಟ್ ಶಾಲೆಯವರೆಗೆ ಅಂದಾಜು ಪಟ್ಟಿ ಮಾಡಿ ತಕ್ಷಣ ರಸ್ತೆ ಕಾಮಗಾರಿ ಕೈಗೊಳ್ಳುವುದಾಗಿ ವರದಿ ಸಿದ್ಧಗೊಳಿಸಿ ಸಂಬಂಧಪಟ್ಟ ಯೋಜನಾ ನಿರ್ದೇಶಕರ ಅನುಮೋದನೆಗೆ ಕಳುಹಿಸಲಾಗಿತ್ತು. ಆದರೆ, ಎರಡು ತಿಂಗಳು ಗತಿಸಿದರೂ ಜಿಲ್ಲಾಧಿಕಾರಿಗಳ ಅನುಮತಿಗೆ ಕಳುಹಿಸಿದ್ದ ಕಡತ ನಗರಸಭೆಯಲ್ಲೇ ಉಳಿದುಕೊಂಡಿದೆ. ಕಡತ ರವಾನಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಎಸಗಿದ್ದಾರೆ. ಕಾಲಹರಣ ಮಾಡದೇ ಕೂಡಲೇ ವಾರ್ಡ್ ನಂಬರ್ 3ಕ್ಕೆ ರಸ್ತೆ ಕಾಮಗಾರಿ, ಮೂಲ ಸೌಕರ್ಯಗಳು ಒದಗಿಸುವಂತೆ ಒತ್ತಾಯಿಸಿದರು.

ಅಂಬೇಡ್ಕರ್ ಸೇನೆಯ ಜಿಲ್ಲಾಧ್ಯಕ್ಷ ವಿಶ್ವನಾಥ್ ಪಟ್ಟಿ, ಮಹೇಶ್ ಕುಮಾರ್, ಬಂದೇನವಾಜ್, ಅಮರಯ್ಯ ಸ್ವಾಮಿ,  ಶಬಾನಾ ಬೇಗಂ ಇದ್ದರು.

ಪ್ರತಿಕ್ರಿಯಿಸಿ (+)