ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಸಾಲ ಸೌಲಭ್ಯಕ್ಕೆ ಅವಧಿ ವಿಸ್ತರಣೆ ಮಾಡಲು ಒತ್ತಾಯ

Last Updated 30 ಜೂನ್ 2020, 13:30 IST
ಅಕ್ಷರ ಗಾತ್ರ

ರಾಯಚೂರು: ನಿಜವಾದ ಭಂಗಿ(ಸಫಾಯಿ ಕರ್ಮಚಾರಿ)ಗಳಿಗೆ ಗುರುತಿನ ಚೀಟಿ ವಂಚಿತರಾಗಿದ್ದು, ಸರ್ಕಾರ ನಿಗದಿ ಪೆಇಸಿದ ಸಾಲದ ಅವಧಿಯನ್ನು ಗುರುತಿನ ಚೀಟಿ ಪಡೆಯುವವರೆಗೆ ಅರ್ಜಿ ಹಾಕಲು ಸಮಯವಕಾಶ ವಿಸ್ತರಿಸಬೇಕು ಎಂದು ಕರ್ನಾಟಕ ರಾಜ್ಯ ನಗರಪಾಲಿಕೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ಪದಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ದೇಶದಲ್ಲಿ ನಿಕೃಷ್ಠವಾದ ಮಲಹೊರುವ ಪದ್ದತಿಯನ್ನು ತೆಗೆದುಹಾಕಿ ಆ ಜನಾಂಗದ ವೃತ್ತಿನಿರತರನ್ನು ಮುಖ್ಯವಾಹಿನಿಯಲ್ಲಿ ತರುವ ಉದ್ದೇಶದಿಂದ ವಿವಿಧ ಸೌಲಭ್ಯ ಒದಗಿಸಲು ಅವರ ಸಮೀಕ್ಷೆ ಮಾಡಲು ಮುಂದಾಗಿದ್ದರೂ ಕೂಡ ಸಮರ್ಪಕವಾದ ಮಾಹಿತಿ ದಾಖಲಿಸಿಲ್ಲ. ಗುರುತಿನ ಚೀಟಿ ಪಡೆಯಲು ಜಾಗೃತಿಯ ಕೊರತೆಯಿಂದಾಗಿ ಬಂಗಿ( ಮ್ಯಾನುವೆಲ್ ಸ್ಕ್ಯಾವೆಂಜರ್) ಸಾಲ ಮತ್ತಿತರೆ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ದೂರಿದರು.

ಸಮೀಕ್ಷೆ ಮಾಡಿ ವರ್ಷವಾದರೂ ಗುರುತಿನ ಚೀಟಿ ನೀಡಿಲ್ಲ. ಪ್ರಸಕ್ತ ಸಾಲಿನ ಸಾಲ ಸೌಲಭ್ಯ ಪಡೆಯಲು ಆನ್‌ಲೈನ್ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು ಸಮಸ್ಯೆಯಾಗಿದೆ. ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ ಹಾಗೂ ತಾಂತ್ರಿಕ ಸಮಸ್ಯೆ ನಿವಾರಣೆ ಮಾಡಿ ಅವಧಿ ವಿಸ್ತರಣೆ ಮಾಡಬೇಕು ಎಂದು ಕೇಳಿಕೊಳ್ಳಲಾಗಿದೆ.

ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರನ್ನು ಬಂಗಿ ಜನಾಂಗದವರನ್ನೇ ನೇಮಿಸಬೇಕು. ಐಪಿಡಿ ಸಾಲಪ್ಪನವರ ವರದಿ ತಕ್ಷಣವೇ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಬಾಬು, ಎಚ್.ಕೆ. ರವಿಕುಮಾರ, ಎನ್.ಕೆ. ಕೃಷ್ಣ, ಅನಿಲ್ ಹೇಮರಾಜ ಅಸ್ಕಿಹಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT