ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಅಕ್ರಮ ಅಕ್ಕಿ ಮಾರಾಟ ಆರೋಪ

Last Updated 27 ಅಕ್ಟೋಬರ್ 2020, 16:07 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಾದ್ಯಂತ ಬಡ ಕುಟುಂಬಗಳಿಗೆ ನೀಡುತ್ತಿರುವ ಅನ್ನಭಾಗ್ಯ ಅಕ್ಕಿಯನ್ನು ಆಲ್ದಾಳ್ ವೀರಭದ್ರಪ್ಪಗೌಡ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಕನ್ನಡಿಗರ ರಕ್ಷಣಾ ಸಂಘದ ಪದಾಧಿಕಾರಿಗಳು ಆರೋಪಿಸಿ ಜಿಲ್ಲಾಡಳಿತಕ್ಕೆ ಮಂಗಳವಾರ ಮನವಿ ಸಲ್ಲಿಸಿ, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ರಾಜ್ಯದಲ್ಲಿ ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರು ಕುಟುಂಬಗಳು ಹಸಿವಿನಿಂದ ಬಳಲುಬಾರದು ಎಂದು ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ, ಹಾಲ್ದಾಳ್ ವೀರಭದ್ರಪ್ಪಗೌಡ ಅಕ್ಕಿಯನ್ನು ಹಿಂಬಾಲಕರಿಂದ ಜಿಲ್ಲೆಯಾದ್ಯಂತ ಗೋದಾಮುಗಳಿಂದ ನೇರವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ದೂರಿದರು.

ನಗರದ ಗದ್ವಾಲ್ ರಸ್ತೆ ಹಾಗೂ ಮತ್ತಿತರೆ ಅಕ್ಕಿ ಗಿರಣಿಗಳಿಗೆ ಅಕ್ಕಿಯನ್ನು ಪಾಲಿಶ್ ಮಾಡಿ ಅಕ್ರಮ ಹೊರ ರಾಜ್ಯಕ್ಕೆ ಮಾರಾಟ
ಮಾಡುತ್ತಿದ್ದಾರೆ. ಆದರೆ ಅಧಿಕಾರಿಗಳು ಕಣ್ಣುಮುಚ್ಚಿಕೊಂಡು ಕುಳಿತ್ತಿದ್ದಾರೆ. ವೀರಭದ್ರಪ್ಪಗೌಡ ಮತ್ತು ಆತನ ಕುಟುಂಬಕ್ಕೆ ಸೇರಿದ ಎರಡು ರೈಸ್ ಮಿಲ್ ಗಳಲ್ಲಿ ನೇರವಾಗಿ ಗೋದಾಮಿನಿಂದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮನ್ಸಲಾಪೂರು ರಸ್ತೆಯಲ್ಲಿರುವ ಕೆಲವು ರೈಸ್‌ಮಿಲ್‌ಗಳಲ್ಲಿ ಮತ್ತು ಈ ಅನ್ನಭಾಗ್ಯ ಯೋಜನೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ಅಕ್ರಮ ದಂಧೆಯಲ್ಲಿ ತೊಡಗಿವೆ. ಜಿಲ್ಲೆಯ ಮಾನ್ವಿ, ದೇವದುರ್ಗ, ಸಿಂಧನೂರು ಮತ್ತು ರಾಯಚೂರು ನಗರದ ಎಲ್ಲ ಅನ್ನಭಾಗ್ಯ ಅಕ್ಕಿಯನ್ನು ಮಾರಾಟವಾಗುತ್ತಿವೆ. ಹಿಂದೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಿದರೂ ಕೂಡ ಯಾವುದೇ ಕ್ರಮ ಜರುಗಿಸಿಲ್ಲ. ಕೂಡಲೇ ಅಕ್ರಮ ದಂಧೆಯಲ್ಲಿ ತೊಡಗಿಸಿಕೊಂಡವರನ್ನು ಬಂಧಿಸಬೇಕು ಹಾಗೂ ಅಕ್ರಮ ಅಕ್ಕಿ ಮಾರಾಟ ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ಸಂಘದ ಪದಾಧಿಕಾರಿಗಳಾದ ಇಮ್ರಾನ್ ಬಡೇಸಾಬ್, ಎಂ. ನರಸಿಂಹ, ಸೈಯದ್ ರಶೀದ್ ,ಕುಮಾರಿ ಜ್ಯೋತಿಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT