ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಲಾಸಪೂರ ಬಡಾವಣೆಗೆ ರುದ್ರಭೂಮಿ ಮಂಜೂರು ಮಾಡಲು ಒತ್ತಾಯ 

Last Updated 27 ಸೆಪ್ಟೆಂಬರ್ 2022, 14:45 IST
ಅಕ್ಷರ ಗಾತ್ರ

ರಾಯಚೂರು: ನಗರದ ವಾರ್ಡ್ ನಂಬರ್ 34 ಯಾಕ್ಲಾಸಪೂರ ನಿವಾಸಿಗಳಿಗೆ ರುದ್ರಭೂಮಿ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಯಾಕ್ಲಾಸಪೂರ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮಂಗಳವಾರ ಮನವಿ ಸಲ್ಲಿಸಿದರು.

ರಾಯಚೂರು ಹೋಬಳಿಯ ಯಾಕ್ಲಾಸಪೂರ ಸೀಮಾಂತರದ ಸರ್ವೆ ನಂಬರ್ 41ರಲ್ಲಿ 2 ಎಕರೆ ಜಮೀನನ್ನು 2017-18 ನೇ ಸಾಲಿನಲ್ಲಿ ರುದ್ರಭೂಮಿಗಾಗಿ ಮಂಜೂರು ಮಾಡಲಾಗಿದೆ. ರುದ್ರಭೂಮಿಯು ನಮ್ಮ ವಾರ್ಡ್ ನಿಂದ 5 ಕಿ.ಮೀ ದೂರದಲ್ಲಿದ್ದು, ಆ ರುದ್ರಭೂಮಿಗೆ ಹೋಗಲು ಬರಲು ಮುಖ್ಯ ರಸ್ತೆ ಇಲ್ಲ. ಕೆಲವು ಜಮೀನು ಲೇಔಟ್ ಗಳಾಗಿದ್ದು ಲೇಔಟ್ ಮಾಲೀಕರು ನಿವಾಸಿಗಳು ಈ ಮಾರ್ಗದಿಂದ ಹೋಗದಂತೆ ತಡೆಯುತ್ತಿದ್ದಾರೆ ಎಂದು ದೂರಿದರು.

ಪ್ರಸ್ತುತ ರುದ್ರಭೂಮಿಯು ಕೆರೆಯ ಬಳಿಯಿದ್ದು ಗುಂಡಿ ತೋಡಿದರೆ ನೀರು ಬರುತ್ತಿದೆ, ಮಳೆಗಾಲ್ಲಿ ಮತ್ತಷ್ಟು ಸಮಸ್ಯೆ ಉಲ್ಬಣವಾಗುತ್ತಿದೆ ಸರ್ವೆ ನಂಬರ್ 73/*/2 ರ 2.7 ಎಕರೆ ಗೈರಾಣಿ ಭೂಮಿ ಇದ್ದು, ಸದರಿ ರುದ್ರಭೂಮಿಯನ್ನು ರದ್ದು ಪಡಿಸಿ ಬೇರೆ ರುದ್ರಭೂಮಿ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಈರಣ್ಣ, ಮಲ್ಲಿಕಾರ್ಜುನ, ನರಸಪ್ಪ, ಅಂಜಿನೆಯ್ಯ, ಶಿವಪ್ಪ, ಹುಳಿಗೆಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT